ಸಮಸ್ತ ಒಕ್ಕಲಿಗ ಕುಲಬಾಂಧವರಲ್ಲಿ ಒಂದು ಪ್ರಬಲ ಸಂದೇಶ ಹಾಗೂ ಒಗ್ಗಟ್ಟಿನ ಕರೆ

ಈ ಸಂದೇಶವು ಮುಳಬಾಗಿಲಿನಲ್ಲಿ ನಡೆಯಲಿರುವ ಕೆಂಪೇಗೌಡ ಜಯಂತಿ ಆಚರಣೆಯ ಕುರಿತು ಒಕ್ಕಲಿಗ ಸಮುದಾಯಕ್ಕೆ ಮಾಡುವ ಕಳಕಳಿಯ ಮನವಿಯಾಗಿದೆ. ಪುತ್ತಳಿ ಸ್ಥಾಪನೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಆದೇಶಗಳನ್ನು ಗೌರವಿಸಿ, ಯಾವುದೇ ಕಾನೂನು ತೊಡಕುಗಳು ಎದುರಾಗದಂತೆ ಸಂಪೂರ್ಣವಾಗಿ ಕಾನೂನಿನ ಚೌಕಟ್ಟಿನಲ್ಲೇ ನಡೆದುಕೊಳ್ಳಲು ಇದು ಸೂಚಿಸುತ್ತದೆ. ಜೊತೆಗೆ, ನಾಯಕ ರೋಹನ್ ಗೌಡರ ವಿರುದ್ಧ ಹಬ್ಬಿಸಲಾಗಿರುವ ಸುಳ್ಳು ಸುದ್ದಿಗಳನ್ನು ಖಂಡಿಸುತ್ತಾ, ಸಮುದಾಯದ ಆಸ್ತಿ ರಕ್ಷಣೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಹಾಗೂ ಯುವಕರನ್ನು ಸಂಘಟಿಸುವಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಪಷ್ಟಪಡಿಸುತ್ತದೆ. ಅಂತಿಮವಾಗಿ, ರಾಜಕೀಯ ಕುತಂತ್ರಗಳಿಗೆ ಒಳಗಾಗದೆ, ಸತ್ಯದ ಪರವಾಗಿ ನಿಂತು ಸ್ವಾಭಿಮಾನಿ ನಾಯಕತ್ವದಡಿಯಲ್ಲಿ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಲು ಇದು ಕರೆ ನೀಡುತ್ತದೆ.

AGS FOR ROHAN GOWDA JI

9/30/20261 min read

🚩 ಸಮಸ್ತ ಒಕ್ಕಲಿಗ ಕುಲಬಾಂಧವರಲ್ಲಿ ಒಂದು ಪ್ರಬಲ ಸಂದೇಶ ಹಾಗೂ ಒಗ್ಗಟ್ಟಿನ ಕರೆ 🚩

"ನಮ್ಮ ಹೆಜ್ಜೆ ಸತ್ಯದ ಕಡೆಗಿರಲಿ, ನಮ್ಮ ಒಗ್ಗಟ್ಟು ಕಾನೂನಿನ ಚೌಕಟ್ಟಿನಲ್ಲಿರಲಿ. ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ, ನಮ್ಮ ಒಕ್ಕಲಿಗರ ಶಕ್ತಿಯನ್ನು ಜಗತ್ತಿಗೆ ತೋರಿಸೋಣ!"

ಪ್ರೀತಿಯ ಮುಳಬಾಗಿಲು ತಾಲೂಕಿನ ಹಾಗೂ ರಾಜ್ಯದ ಸಮಸ್ತ ಒಕ್ಕಲಿಗ ಬಂಧುಗಳೇ,

ನಮ್ಮ ಸಮುದಾಯದ ಹೆಮ್ಮೆ, ಸದಾ ಸತ್ಯದ ಪರ ನಿಲ್ಲುವ ರೋಹನ್ ಗೌಡರ ಬೆಂಬಲಕ್ಕೆ ನಿಲ್ಲುವ ಹಾಗೂ ನಮ್ಮ ಒಕ್ಕಲಿಗರ ಒಗ್ಗಟ್ಟಿನ ಶಕ್ತಿಯನ್ನು 20 ಪಟ್ಟು ಹೆಚ್ಚಿಸಿ. ಇಡೀ ಸಮಾಜಕ್ಕೆ ತೋರಿಸುವ ಕಾಲವಿದು.

ನೆನಪಿರಲಿ, ನಾವು ಏನೇ ಮಾಡಿದರೂ ಅದು ಸಂಪೂರ್ಣವಾಗಿ ಕಾನೂನುಬದ್ಧವಾಗಿರಬೇಕು (Anything must be done Legally). ಯಾರದೋ ಸ್ವಾರ್ಥಕ್ಕಾಗಿ ಹಬ್ಬಿಸುವ ಸುಳ್ಳು ಸುದ್ದಿಗಳನ್ನು (False messages) ದಯಮಾಡಿ ನಂಬದಿರಿ. ಸಮುದಾಯದ ಒಳಿತಿಗಾಗಿ ಮತ್ತು ಸತ್ಯವನ್ನು ತಿಳಿಸುವ ನಿಟ್ಟಿನಲ್ಲಿ ಸಿದ್ಧಪಡಿಸಿರುವ ಈ ಕೆಳಗಿನ ವಾಸ್ತವಿಕ ವಿವರಣೆಯನ್ನು ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳಿ:

(ಸಂಪೂರ್ಣ ವಾಸ್ತವ ಇಲ್ಲಿದೆ)

[ನ್ಯಾಯಾಲಯದ ಎಚ್ಚರಿಕೆ ಮತ್ತು ಕೆಂಪೇಗೌಡರ ಜಯಂತಿ]

ಪ್ರಮುಖ ಸುದ್ದಿ ಒಂದು, ದಯಮಾಡಿ ತಿಳಿಯಿರಿ: ಈ ಬಾರಿಯ ಮುಳಬಾಗಿಲು ತಾಲೂಕಿನ ನಾಡಪ್ರಭು ಕೆಂಪೇಗೌಡರ ಜಯಂತಿಯ ವಿಚಾರವಾಗಿ ದಯಮಾಡಿ ಪ್ರತಿಯೊಬ್ಬರೂ ಆಲಂಗೂರು ಶಿವಣ್ಣರವರ ಪ್ರಯತ್ನವನ್ನು ಬೆಂಬಲಿಸಿ ಸಹಕರಿಸಿ, ಒಕ್ಕಲಿಗರ ಒಗ್ಗಟ್ಟನ್ನು ತೋರಿಸಿ. ಆದರೆ ದಯಮಾಡಿ ಪ್ರಸಕ್ತ ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಯಿರಿ ಮತ್ತು ಸತ್ಯವನ್ನು ಅರಿಯಿರಿ, ಇದನ್ನು ಮರೆಯದಿರಿ. ಯಾವುದೇ ಕಾರಣಕ್ಕೂ ಪ್ರಸಕ್ತ ಕರ್ನಾಟಕ ಉಚ್ಚ ನ್ಯಾಯಾಲಯದ ಅಂಗಳದಲ್ಲಿರುವ ಪ್ರಕರಣವಾದ ಆಲಂಗೂರು ಶ್ರೀನಿವಾಸ್ ಗೌಡರ ಪುತ್ತಳಿಗೆ ಸಂಬಂಧಿಸಿದ ಅರಿವು ನಿಮಗಿರಲಿ.

ಒಂದು ವೇಳೆ ನ್ಯಾಯಾಲಯದ ಅನುಮತಿ ಇಲ್ಲದೆ ತಪ್ಪುಗಳು ನಡೆದಲ್ಲಿ, ಅಂತಹ ವಿಷಯ ವಿಡಿಯೋ ರೆಕಾರ್ಡ್ ಆದ ಪಕ್ಷದಲ್ಲಿ, ಅದರ ಪರಿಣಾಮ ಎದುರಿಸುವುದು ಅಮಾಯಕರು ಅಥವಾ ಬುದ್ಧಿವಂತರು ಯಾರೇ ಆಗಲಿ, ಕಾನೂನು ಒಂದೇ ಇರುತ್ತದೆ. ಒಂದು ವೇಳೆ ಈ ಎಲ್ಲಾ ತಪ್ಪುಗಳನ್ನು ತಹಸಿಲ್ದಾರ್ ಅಥವಾ ಮುನಿಸಿಪಲ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ ಇವರುಗಳ ಷಡ್ಯಂತ್ರ ಅಥವಾ ಕರ್ತವ್ಯ ಲೋಪದಿಂದ ಹೀಗಾಗಿದೆ ಎಂದು ಅವರ ಮೇಲೆ ತಪ್ಪು ಹಾಕಬಹುದು. ಆದರೆ ಅವರ ಜೊತೆಗೆ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಗಳ ಮೇಲೆ 'ಕಂಟೆಂಪ್ಟ್ ಆಫ್ ಕೋರ್ಟ್' (Contempt of court) ಆಗುತ್ತದೆ ಎಂಬ ಎಚ್ಚರಿಕೆ ಇರಲಿ. ತದನಂತರ ಎಲ್ಲವನ್ನು ಒಬ್ಬರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಲು ರಾಜಕೀಯ ನಾಯಕರು ಇರುತ್ತಾರೆ, ದಯಮಾಡಿ ಎಚ್ಚರಿಕೆಯಿಂದ ಇರಿ. ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯ್ದಿರಿಸಿ ತಾಳ್ಮೆಯಿಂದ ಇರಬೇಕು ಹಾಗೂ ನಮ್ಮ ಕೆಂಪೇಗೌಡರ ಜಯಂತಿಯನ್ನು ಎಂದಿನಂತೆ ನಡೆಸಿಕೊಳ್ಳಬೇಕು. ಅದೇ ದಿನದಂದು ಪುತ್ತಳಿ ಅನಾವರಣ ಮಾಡಿದರೆ ಅದು ಅಧಿಕೃತವಾಗುವುದಿಲ್ಲ ಎಂಬುದನ್ನು ಮರೆಯದಿರಿ, ದಯಮಾಡಿ ಕೆಂಪೇಗೌಡರ ನ್ಯಾಯ ಧರ್ಮದ ನಡೆಯನ್ನು ಮರೆಯದಿರಿ.

[ಪುತ್ತಳಿ ಅನಾವರಣ: ಅನುಮೋದನೆ ಮತ್ತು ವಾಸ್ತವಿಕತೆ]

ಮುಳಬಾಗಿಲು ನಗರದ ಸೌಂದರ್ಯ ಸರ್ಕಲ್ ಬಳಿ ಇರುವ ತಾಲೂಕು ಒಕ್ಕಲಿಗರ ಸಂಘ ಮುಳಬಾಗಿಲು ತಮ್ಮ ಚಟುವಟಿಕೆಗೆ ಪಡೆದಿರುವ ಜಾಗದಲ್ಲಿ, ಜಿಲ್ಲಾಧಿಕಾರಿರವರ ಅನುಮತಿಯಂತೆ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ಅನಾವರಣಕ್ಕೆ ಕಾನೂನು ರೀತಿಯ ನಗರ ಸೌಂದರ್ಯೀಕರಣದ ಮೆಚ್ಚುಗೆಯ ಹೆಜ್ಜೆ ಆಗಿತ್ತು. ಇದಕ್ಕೆ ಪೂರಕವಾಗಿ ಅಂದಿನ ಶಾಸಕರಾದ ಎಚ್. ನಾಗೇಶ್ ರವರು ಬಹಳ ಉತ್ಸುಕತೆಯಿಂದ ನಾಡಪ್ರಭು ಶ್ರೀ ಕೆಂಪೇಗೌಡರ ಈ ಒಂದು ಕಾರ್ಯಕ್ಕೆ ಸಹಕರಿಸಿದರು. ಅದರಂತೆ ಕಾನೂನು ರೀತಿಯ ಪತ್ರಗಳಲ್ಲಿ ಅನುಮೋದನೆ ಸಿಕ್ಕಿರುವುದು ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ ನಗರ ಸೌಂದರ್ಯೀಕರಣಕ್ಕೆ.

ತದನಂತರ ಶಾಸಕ ಸಮೃದ್ಧಿ ಮಂಜುನಾಥ್ ರವರು ಪ್ರಸಕ್ತ ಈಗಿರುವ ವಿಷಯದಲ್ಲಿ ಜಿಲ್ಲಾಧಿಕಾರಿರವರು ಮತ್ತು ಮುನಿಸಿಪಾಲ್ ಕಮಿಷನರ್ ರವರ ಬಳಿ ವಾಸ್ತವವನ್ನು ತಿಳಿದು ನಾಡಪ್ರಭು ಶ್ರೀ ಕೆಂಪೇಗೌಡರ ಗೌರವಕ್ಕೆ ತೂಗುವ ವ್ಯವಸ್ಥೆ ಮಾಡಬಹುದಿತ್ತು...? ಆದರೆ ಬಹುಶಃ ಅವರು ತಾಲೂಕಿನ ಕೆರೆಗಳನ್ನು ರಕ್ಷಿಸುವ ವಿಚಾರದಲ್ಲಿ ಹಾಗೂ ಅನಧಿಕೃತ ಬಾರ್‌ಗಳನ್ನು ಮುಚ್ಚಿಸಿ ಸಮಾಜಕ್ಕೆ ನ್ಯಾಯ ಕೊಡುವ ವಿಷಯದಲ್ಲಿ ಬಹಳ ಕಣ್ಣಿಗೆ ಕಾಣಿಸುವಂತೆ ಜಾತ್ಯಾತೀತರಾಗಿ ನಡೆದು ಕೊಳ್ಳುತ್ತಿರುವುದರಿಂದ, ಅಥವಾ ಕೆಲವು ಗಾಳಿ ಸುದ್ದಿಯಂತೆ ಪಕ್ಷದ ಮೇಲಿರುವ ನಿಷ್ಠೆಯಿಂದಲೋ ಅಥವಾ ಸ್ವಇಚ್ಛೆ ಅಭಿಮಾನದಿಂದಲೋ ತಿಳಿಯದು! ನೂರಕ್ಕೆ ನೂರರಷ್ಟು ಅನಧಿಕೃತವಾಗಿ ಆಲಂಗೂರು ಶ್ರೀನಿವಾಸಗೌಡರ ಪುತ್ತಳಿಯನ್ನು - ನಾಡಪ್ರಭು ಶ್ರೀ ಕೆಂಪೇಗೌಡರ ಸಮನಾಗಿ ಇರಿಸುವ ಪ್ರಯತ್ನಕ್ಕೆ ಪೂರಕವಾದಂತಹ ವಾತಾವರಣ ಸೃಷ್ಟಿಸಿದರು.

ಈ ವಿಚಾರವನ್ನು ಮಾತನಾಡುವ ಯಾರೇ ಆಗಲಿ ಮೊದಲು ದಾಖಲಾತಿಗಳನ್ನು ನೋಡಬೇಕು; ಅಲ್ಲಿನ ಸ್ಥಳದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿಗೆ ಅನುಮೋದನೆ ದೊರಕಿದೆಯೋ ಅಥವಾ ಆಲಂಗೂರು ಶ್ರೀನಿವಾಸಗೌಡರ ಪುತ್ತಳಿಗೆ ಅನುಮೋದನೆ ದೊರೆತಿದೆಯೋ ಎಂದು?

[ರೋಹನ್ ಗೌಡರ ಸಂಘಟನಾ ಶಕ್ತಿ ಮತ್ತು ನಿಸ್ವಾರ್ಥ ಸೇವೆ]

ಆದರೆ ವಿಪರ್ಯಾಸ ಏನೆಂದರೆ, ಈ ಎಲ್ಲದರ ನಡುವೆ ತಾಲೂಕಿನ ಸಮಗ್ರ ಒಕ್ಕಲಿಗರ ಐಕ್ಯತೆ (ಅಂದರೆ ಪ್ರಮುಖವಾಗಿ ಕೇವಲ ರಾಜಕೀಯ ನಾಯಕರಲ್ಲದೆ ಕಷ್ಟಪಟ್ಟು ಹಳ್ಳಿಗಳಲ್ಲಿ ಒಕ್ಕಲುತನದಲ್ಲಿ ತೊಡಗಿರುವ ಹಾಗೂ ಸಮುದಾಯ ಎಂದರೆ ಒಂದಿಷ್ಟು ಉತ್ಸುಕತೆಯಿಂದ ಮೊದಲ ಹೆಜ್ಜೆಯಾಗಿ ಬರುವ ಯುವಕರು) ಹೀಗೆ ಅನೇಕರನ್ನು ಕಡೆಗಣಿಸಿ ಮತ್ತು ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ಹಾಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜೊತೆಗೆ ಸಮನಾಗಿ ಆಲಂಗೂರು ಶ್ರೀನಿವಾಸ್ ಗೌಡರ ಪುತ್ತಳಿ ಇಡುವ ಅವಶ್ಯಕತೆಯನ್ನು ಅನಧಿಕೃತವಾದರೂ ಮುನ್ನಡೆಸಿದ ಪರಿಣಾಮವಾಗಿ ಹಲವಾರು ವಿಷಯಗಳು ನಡೆದವು.

ಅದರಲ್ಲಿ ಪ್ರಮುಖವಾಗಿ ಮುಳಬಾಗಿಲು ತಾಲೂಕಿನಲ್ಲಿ ಹುಟ್ಟಿ ಬೆಳೆದು ಸದಾಕಾಲ ಒಕ್ಕಲಿಗ ಸಮುದಾಯದ ಧ್ವನಿಯಾಗಿ ರಾಜ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿ, ಸಮುದಾಯ ಸೇವೆಯನ್ನು ಪ್ರಥಮವಾಗಿ ನಡೆಸಿಕೊಂಡು ಬಂದಿದ್ದ ರೋಹನ್ ಗೌಡರು ಈ ಎಲ್ಲಾ ವಿಚಾರಗಳನ್ನು ಅರಿತರು. ಹಾಗೂ ಪ್ರಮುಖವಾದಂತಹ ತಾಲೂಕಿನ ಅನೇಕ ಕಡೆ ಬಡತನ ಮತ್ತು ಯಾವುದೇ ರೀತಿಯ ಸಮುದಾಯಿಕ ಭಾವನೆಗಳು ಇದ್ದರೂ ಸಹ ಅವರನ್ನು ಕಡೆಗಣಿಸಿರುವಂತಹ ಕುಲಬಾಂಧವರ ಸಲಹೆಗಳನ್ನು ಪಡೆದರು.

ನಂತರ 'ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘ' ಎಂಬ ಹೆಸರನ್ನು ಅಧಿಕೃತವಾಗಿ ನೊಂದಾಯಿಸಿ ತಾಲೂಕಿನ ಕನಿಷ್ಠ 1,000ಕ್ಕೂ ಹೆಚ್ಚು ಕುಲಬಾಂಧವರನ್ನು ಸದಸ್ಯರನ್ನಾಗಿ ಮಾಡಿ, ಅವರಿಗೆ ಕೇವಲ 125 ರೂಪಾಯಿಗಳಿಗೆ ಒಂದು ಗೌರವಾನ್ವಿತ ಸದಸ್ಯತ್ವ ಕಾರ್ಡ್ ಮತ್ತು ಮುದ್ರಿತ ಟ್ಯಾಗ್ ನೀಡುವುದಲ್ಲದೆ, ಸಮುದಾಯದ ಗುರುತಿಕೆಯನ್ನು ಅನೇಕರಿಗೆ ತಲುಪಿಸುವಲ್ಲಿ ಪ್ರಯತ್ನಪಟ್ಟು ಒಂದು ರೀತಿ ಸಫಲರಾಗಿ ಒಂದಿಷ್ಟು ತಂಡವನ್ನು ರಚಿಸಿ ಪ್ರಸಕ್ತ ಆಡಳಿತ ಮಂಡಳಿ ಚಾಲ್ತಿಯಲ್ಲಿದೆ.

[ನ್ಯಾಯಾಲಯದ ಹೋರಾಟ ಮತ್ತು ಸುಳ್ಳು ಸುದ್ದಿಗಳ ಖಂಡನೆ]

ರೋಹನ್ ಗೌಡರ ಹಾಗೂ ಈ ಹಿಂದೆ ಇದ್ದ ಮತ್ತು ಬಹಳ ವರ್ಷಗಳ ಕಾಲ ಯಾವುದೇ ರೀತಿಯ ನಿರ್ವಹಣೆ ಮಾಡದೆ ನಡೆಸಿಕೊಂಡು ಬಂದಿದ್ದ ತಾಲೂಕು ಒಕ್ಕಲಿಗರ ಸಂಘ ಮುಳಬಾಗಿಲು ನಡುವೆ ಒಂದಿಷ್ಟು ಸಮುದಾಯಿಕ ಸಂಘರ್ಷಗಳು ನಡೆದ ನಂತರ, ಈ ಹಿಂದೆಯಿಂದ ಇದ್ದ ಸಂಘ ತಮ್ಮ ಎಲ್ಲಾ ದಾಖಲಾತಿಗಳನ್ನು ನೊಂದಣಿಗೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳನ್ನು ಸರಿ ಮಾಡಿಕೊಂಡಿದ್ದು ಬಹಳ ಉತ್ತಮವಾದ ವಿಷಯ. ಹಾಗೂ ತದನಂತರ ಮುಳಬಾಗಿಲು ತಾಲೂಕಿನಲ್ಲಿ ಎಲ್ಲಾ ಸಂಘಟನೆಗಳು ಒಂದಾಗಿ ಹೋಗುವ ವಿಚಾರಕ್ಕೆ ಸ್ಪಂದಿಸಿ ರೋಹನ್ ಗೌಡರು ಜಿಲ್ಲಾ ಮತ್ತು ರಾಜ್ಯ ಒಕ್ಕಲಿಗರ ಪರ ಹಿತಾಸಕ್ತಿಯಲ್ಲಿ ತೊಡಗಿದರು.

ಆದರೆ ಈ ಮಧ್ಯೆ ರಾಜ್ಯ ಪರ ಸಂಘಟನೆಗಳಲ್ಲಿ ಇದ್ದ ಕಾರಣ, ಮೂಲತಃ ಒಕ್ಕಲಿಗರ ಸಂಘದ ಧ್ಯೇಯೋದ್ದೇಶಗಳನ್ನು ಅಧ್ಯಯನ ಮಾಡಿ ಅರಿತ ನಂತರ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡರ ಅಸ್ಮಿತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಕಾರಣದಿಂದ, ಅವರ ಜೊತೆಗೆ ಯಾರದೇ ಒಬ್ಬ ಮಹನೀಯರ ಪುತ್ತಳಿ ಸಮನಾಗಿ ಬರುವುದು ನಮ್ಮ ನಾಡಪ್ರಭು ಕೆಂಪೇಗೌಡರ ಮೇಲಿನ ನಿಷ್ಠೆಯನ್ನು ಪ್ರಶ್ನಾತೀತ ಮಾಡುವಂತಹ ವಿಚಾರವಾಗಿರುತ್ತದೆ ಎಂಬ ದೃಷ್ಟಿಕೋನದಿಂದ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪ್ರಸಕ್ತ ಅನಧಿಕೃತವಾಗಿ ಇರಿಸಿರುವ ಆಲಂಗೂರು ಶ್ರೀನಿವಾಸಗೌಡರ ಪುತ್ತಳಿಯನ್ನು ಅನಾವರಣಗೊಳ್ಳುವ ಮುನ್ನ ತಡೆ ತರಲಾಯಿತು. ಈ ವಿಚಾರವಾಗಿ ಪ್ರಸಕ್ತ ಇರುವ ಶಾಸಕರ ಗಮನಕ್ಕೂ ತಂದಿರುವ ಪತ್ರಗಳು ಇವೆ ಹಾಗೂ ನಾಯಕರಿಗೂ ಈ ವಿಷಯಗಳನ್ನು ತಿಳಿಸಲಾಯಿತು, ಆದರೆ ಯಾರು ಕಿಮ್ಮತ್ತಿನ ಗೌರವ ನೀಡಿರುವುದಿಲ್ಲ. ಇದೇ ಸಂದರ್ಭದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಗೌರವವನ್ನು ಕಾಪಾಡುವ ನಿಟ್ಟಿನ ಕ್ರಿಯೆ ಇದಾಗಿತ್ತು. ಈಗಲೂ ಸಹ ಯಾವುದೇ ಕಾರಣಕ್ಕೂ ನಮ್ಮ ಮನಸ್ಸಿಗೆ ನಾಡಪ್ರಭು ಶ್ರೀ ಕೆಂಪೇಗೌಡರ ಪಕ್ಕದಲ್ಲಿ ವಿಗ್ರಹವನ್ನು ಇಡುವುದನ್ನು ನಾವು ಒಪ್ಪುವುದಿಲ್ಲ.

ಆದರೆ ಈ ಎಲ್ಲಾ ವಿಚಾರಗಳ ಮಧ್ಯದಲ್ಲಿ ತಾಲೂಕಿನ ಒಕ್ಕಲಿಗರು ಒಂದಾಗಿ ಹೋಗುವ ಉದ್ದೇಶದಿಂದ, ರಾಜ್ಯಾದ್ಯಂತ ಒಕ್ಕಲಿಗರ ಮನದಾಳದ ವಿಶ್ವಾಸವನ್ನು ಬದಿಗೆ ತಳ್ಳಿ ಕೇವಲ ಮುಳಬಾಗಿಲು ತಾಲೂಕಿನ ಅತಿ ಹೆಚ್ಚು ಒಕ್ಕಲಿಗ ಇತಿಹಾಸವನ್ನು, ಕೆಂಪೇಗೌಡರ ಐತಿಹ್ಯವನ್ನು ತಿಳಿಯದ ಅಮಾಯಕ ಒಕ್ಕಲಿಗರ ಗಮನಿಕೆಗಾಗಿ ನೂತನವಾಗಿ ನೇಮಕಗೊಂಡ ತಾಲೂಕು ಒಕ್ಕಲಿಗರ ಸಂಘ ಮುಳಬಾಗಿಲು ಅಧ್ಯಕ್ಷರಾದ ಆಲಂಗೂರು ಶಿವಣ್ಣ ರವರ ಮಾತುಗಳನ್ನು ಮತ್ತು ಅವರ ಜೊತೆಗೂಡಿ ಬಂದಿದ್ದ ಬೆಂಬಲಿಗರು ಇವರೆಲ್ಲರ ಮಾತಿಗೆ ಗೌರವಿಸಿ ನಾನು ಹೆಚ್ಚಿನ ಹೋರಾಟದ ಕಿಚ್ಚನ್ನು ಅಡಗಿಸಲಾದ ವಾಸ್ತವ ಎಲ್ಲರಿಗೂ ತಿಳಿದಿರಲಿ. ಮತ್ತು ಇದೇ ವಿಚಾರವಾಗಿ ಬೆಂಗಳೂರಿನ ಹಿರಿಯ ಉಚ್ಚ ನ್ಯಾಯಾಲಯದ ವಕೀಲ ಶಿವ ರೆಡ್ಡಿ ರವರನ್ನು (ವಿರೋಧಿ ಬಣದ ವಕೀಲರು) ಆಲಂಗೂರ್ ಶಿವಣ್ಣ ಅವರೊಂದಿಗೆ ಭೇಟಿ ಮಾಡಿ ಮಾತನಾಡಿದ್ದೇವೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು.

ಆದರೆ ಕೆಲವು ತಿಳಿಗೇಡಿಗಳು ಈ ಒಂದು ಪ್ರಕರಣದ ವಿಚಾರವಾಗಿ ರೋಹನ್ ಗೌಡರು ಹಣ ಪಡೆದಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿರುವುದು ವಿಷಾದನೀಯ. ಯಾವುದೇ ವೈಯಕ್ತಿಕ ಲಾಭವಿಲ್ಲದೆ ಯಾವುದೇ ರೀತಿಯ ದೇಣಿಗೆಗಳನ್ನು ಪಡೆಯದೆ ಸ್ವಾಭಿಮಾನವನ್ನು ಪ್ರಥಮವಾಗಿ ಇರಿಸಿ ಸಮುದಾಯದ ಗೌರವವನ್ನು ಎತ್ತಿ ಹಿಡಿಯುತ್ತಾ ಸಾಗಿರುವ ಸಂಘಟನಾಕಾರರಾದ ರೋಹನ್ ಗೌಡರ ಮೇಲೆ ಈ ರೀತಿಯ ಆಪಾದನೆ ಎಷ್ಟು ಸರಿ?

ಈ ಮಾತು ಸತ್ಯಕ್ಕೆ ದೂರವಾದದ್ದು ಹಾಗೂ ಕುತಂತ್ರದಿಂದ ಕೂಡಿರುವಂತಹ ಕ್ರಿಯೆಯಾಗಿರುತ್ತದೆ. ಯಾವುದೇ ಕಾರಣಕ್ಕೂ ಕೆಂಪೇಗೌಡರ ಸಾಕ್ಷಿಯಾಗಿ ರೋಹನ್ ಗೌಡರು ಒಂದು ರೂಪಾಯಿ ಹಣವನ್ನು ಈ ವಿಚಾರವಾಗಿ ಯಾರಿಂದಲೂ ಪಡೆದಿರುವುದಿಲ್ಲ ಮತ್ತು ನಮ್ಮ ವಕೀಲರು ಯಾವುದೇ ಕಾರಣಕ್ಕೂ ಯಾರಿಂದಲೂ ಹಣ ಪಡೆದಿರುವುದಿಲ್ಲ. ನಮ್ಮ ತಂಡ ಕೆಂಪೇಗೌಡರ ಅಸ್ಮಿತೆಗಳನ್ನು ಅನುಸರಿಸುವ ತಂಡ; ಯಾವುದೇ ಕಾರಣಕ್ಕೂ ಸ್ವಾಭಿಮಾನ ಹೀನರಾಗಿ ಕ್ಷಣವೂ ನಾವು ಯೋಚಿಸುವುದಿಲ್ಲ, ದಯಮಾಡಿ ಇದನ್ನು ಯಾರೇ ಇರಲಿ ಮೊದಲು ಅರಿಯಿರಿ.

[ಸಮುದಾಯದ ಆಸ್ತಿ ರಕ್ಷಣೆ ಹಾಗೂ ಭ್ರಷ್ಟರ ವಿರುದ್ಧದ ನಿರಂತರ ಹೋರಾಟ]

ಒಬ್ಬ ವ್ಯಕ್ತಿಯನ್ನು ಅಪಪ್ರಚಾರ ಮಾಡಿ ತೊಂದರೆ ಪಡಿಸುವ ಉದ್ದೇಶ ಒಳ್ಳೆಯದಲ್ಲ ಮತ್ತು ಮುಳಬಾಗಿಲು ತಾಲೂಕಿನಲ್ಲಿ ಕೆಲವು ಪ್ರಕರಣಗಳು ಆದಾಗ ನಾಟಕ ಮಾಡುವ ಅನೇಕ ಮಂದಿ ಯುಟ್ಯೂಬ್, ಫೇಸ್ಬುಕ್ ಗಳಲ್ಲಿ ಬರಬಹುದು. ಆದರೆ ನಿಜವಾದ ಒಕ್ಕಲಿಗರು ಯಾರಾದರೂ ತಮ್ಮ ಸ್ವಹಿತಾಸಕ್ತಿ ಮತ್ತು ರಾಜಕೀಯದ ತಮ್ಮ ನಿಲುವುಗಳನ್ನು ಬಿಟ್ಟು 'ನಾನು ಒಕ್ಕಲಿಗ ಸಮುದಾಯಕ್ಕಾಗಿ ನಿಲ್ಲುತ್ತೇನೆ' ಎಂದು ಮುಂದೆ ಬಂದಿರುವ ನಿದರ್ಶನಗಳು ಬಹಳ ಕಡಿಮೆ ಎಂಬುದನ್ನು ಮರೆಯಬೇಡಿ. ಈ ಹಿಂದೆ ಒಕ್ಕಲಿಗರ ಹೆಣ್ಣುಮಕ್ಕಳ ಮೇಲೆ ಕೆಟ್ಟ ಮಾತುಗಳನ್ನು ಆಡಿದಾಗ ಇದೇ ಕೆಲವರು ಹೋಗಿ ರಾಜಿಯಾಗಿ ಬರುತ್ತಾರೆ, ಅಂತಹ ಸಂದರ್ಭದಲ್ಲಿ ರೋಹನ್ ಗೌಡರು ಯಾವುದಕ್ಕೂ ಮಣಿಯದೆ ಕಾನೂನು ರೀತಿಯ ಬಿಸಿ ಮುಟ್ಟಿಸುತ್ತಾರೆ.

ಈಗಲೂ ಸಹ ಮುಳಬಾಗಿಲು ತಾಲೂಕಿನಲ್ಲಿ ಸಮುದಾಯದ ಈ ಹಿಂದೆಯಿಂದಲೇ ಬಂದಿದ್ದ ನಾಯಕರುಗಳು ಮತ್ತಷ್ಟು ಸಮುದಾಯಿಕ ಆಲೋಚನೆಗಳನ್ನು ಬೆಳೆಸಿಕೊಳ್ಳಲಿ ಎಂದು ಆಶಿಸಿ, ಅವರಿಗೆ ತಮ್ಮೊಂದಿಗೆ ರೋಹನ್ ಗೌಡ ಇರುತ್ತಾನೆ ಎನ್ನುವ ಭರವಸೆಯನ್ನು ಕೊಟ್ಟ ನಂತರ, ಪ್ರಸಕ್ತ ಕೋಲಾರ ಜಿಲ್ಲೆಯ ಸದಾಕಾಲ ಜನರನ್ನು ಅಂದರೆ ಸಮುದಾಯದ ಜನರನ್ನು ನಂಬಿಸಿ ಸುದೀರ್ಘವಾಗಿ 40 ವರ್ಷ ತನ್ನ ಎಲ್ಲಾ ಕೌಟುಂಬಿಕ ಉನ್ನತಿಯನ್ನು ಗಳಿಸಿಕೊಂಡು ತನ್ನ ಸುತ್ತಲೂ ಎಲ್ಲಾ ಬಕೆಟ್ ಸಂಸ್ಕೃತಿ ಹೊಂದಿರುವ ನಾಯಕರನ್ನು ಇರಿಸಿಕೊಂಡು, 40 ವರ್ಷಗಳಿಂದ ಅದೇ ರೀತಿಯ ಸಮುದಾಯದ ನಿಜವಾದ ಕೆಲಸ ಮಾಡದೆ ಕೇವಲ ಕಣ್ಣೊರೆಸಿಕೊಂಡು ಅಮಾಯಕ ಒಕ್ಕಲಿಗರಿಗೆ ಮೋಸ ಮಾಡುತ್ತಲೇ ಬಂದಿದ್ದ ಜಿಲ್ಲಾ ಸಂಘದ ಸಂಪೂರ್ಣ ಎಲ್ಲರ ಮೇಲೆ ಯುದ್ಧ ಸಾರಿದರು. ಹಾಗೂ ಇಂದು ಬಹಳ ಸಂತೋಷದ ವಿಷಯ; ಪ್ರಬುದ್ಧ ಕುಲಬಾಂಧವ್ಯತೆಯ ಆಶಾ ಕಿರಣಕ್ಕೆ ಕಾಲಭೈರವೇಶ್ವರನ ಆಶೀರ್ವಾದದಂತೆ ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ-ಸಂಸ್ಥೆಗಳ ಒಕ್ಕೂಟ ವ್ಯವಸ್ಥೆಯಲ್ಲಿ ನಿಜವಾದ ಒಕ್ಕಲಿಗರು ಇದ್ದಾರೆ ಎಂಬ ನಂಬಿಕೆಯನ್ನು ಗಟ್ಟಿ ಮಾಡಿರುವುದು ಮಾಲೂರಿನ ಸಂಘಟನಾಕಾರರುಗಳು ಹಾಗೂ ಕೋಲಾರದ ಹಾಗೂ ಪ್ರಮುಖವಾಗಿ ವೇಮಗಲ್ ಕ್ಷೇತ್ರದ ಸಮುದಾಯದ ಭಗೀರಥರು ಎಲ್ಲರೂ ಸೇರಿ ಇಂದು ಜಿಲ್ಲಾ ವೇದಿಕೆಯಾಗಿ ನಿಂತಿದ್ದಾರೆ.

ಇದರ ಜೊತೆಗೆ ರಾಜ್ಯ ಸಂಘದ ಅವ್ಯವಹಾರಗಳು ಮತ್ತು ಅದರ ಬಗ್ಗೆ ಸಮುದಾಯದ ಪ್ರತಿಯೊಬ್ಬರಿಗೆ ತಿಳಿಸದೆ ಅಲ್ಲಿಯೂ ಸಹ ಅನೇಕ ಅವ್ಯವಸ್ಥೆಗಳು ಕಂಡು ಬಂದ ಕಾರಣ ಅಲ್ಲಿನ ಸಮಸ್ಯೆಗಳ ಬಗೆಹರಿಸುವ ಹೋರಾಟಗಳಲ್ಲಿ ರೋಹನ್ ಗೌಡರು ಸಕ್ರಿಯರಾಗಿ ತೊಡಗಿಸಿಕೊಂಡಿರುತ್ತಾರೆ. ಮತ್ತು ಈ ಮಧ್ಯೆ ಸಾದ್ವಿ ರಂಗಮ್ಮ ನವರು ದಾನವಾಗಿ ನೀಡಿದ್ದ 96 ಎಕರೆ 35 ಗುಂಟೆ ಆಸ್ತಿಯನ್ನು ಇದೇ ನಮ್ಮ ರಾಜ್ಯ ಸಂಘದ ಹಿಂದಿನ ಮತ್ತು ಈಗಿನ ನಿರ್ದೇಶಕರುಗಳು ದಿಕ್ಕು ತಪ್ಪಿಸಿ ಎಲ್ಲಿಯೂ ಪೂರ್ಣ ಜಮೀನಿಗೆ ಮೊಕದ್ದಮೆ ಹಾಕುವುದನ್ನು ಬಿಟ್ಟು ಕೇವಲ ಅದರಲ್ಲಿನ ಒಂದು ಭಾಗಕ್ಕೆ ಸಾಕಷ್ಟು ಕೋಟಿ ರೂಪಾಯಿಗಳನ್ನು ವ್ಯಯ ಮಾಡಿ ಸಮುದಾಯದ ದಿಕ್ಕು ತಪ್ಪಿಸಿ ನಡೆದುಕೊಳ್ಳುತ್ತಿದ್ದರು. ಈ ವಿಚಾರವಾಗಿ ನಡೆಯುತ್ತಿರುವ ಇಂದಿನ ಹೋರಾಟದ ರೂಪುರೇಷೆ ಚಟುವಟಿಕೆಗಳಲ್ಲಿ ಕಾಳಜಿಯುಕ್ತ ಕೆಲವರ ಜೊತೆಗೆ ರೋಹನ್ ಗೌಡರು ಒಬ್ಬರು. ಇಂದು ಈ ವಿಷಯ ಗಮನಕ್ಕೆ ಬಾರದಿದ್ದರೆ ಕೇವಲ 44 ಎಕರೆ ಮಾತ್ರ ನಮ್ಮದು ಎಂಬಂತೆ ಬಿಂಬಿಸಿ ಚುನಾವಣೆಗಾಗಿ ಅದನ್ನು ಅಸ್ತ್ರವಾಗಿ ಬಳಸಿಕೊಂಡು 'ನಾನು ಮಾಡಿದೆ ನಾನು ಮಾಡಿದೆ' ಎಂಬ ಸುಳ್ಳು ಮಾಹಿತಿಯನ್ನು ಜನರಿಗೆ ನೀಡಿ ಬರುತ್ತಿರುವ ನಿರ್ದೇಶಕರುಗಳು ಮತ್ತು ಕೆಲವು ಭೂಗಳ್ಳರು... ಇಂದು 1 ಲಕ್ಷ ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಯನ್ನು ಇಂದಿನ ಮಕ್ಕಳ ಭವಿಷ್ಯಕ್ಕೆ ಹೋರಾಟ ಮಾಡಿಯಾದರೂ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು.

ಇದರೊಂದಿಗೆ ಮತ್ತೊಂದು ವಿಚಾರ; ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ವಿಚಾರವಾಗಿ ನಾವು ನಡೆಸುತ್ತಿರುವ ಕಾನೂನು ಹೋರಾಟದಲ್ಲಿ ಬಹಳ ಮುನ್ನಡೆ ನಮಗೆ ದೊರಕಿದೆ. ಅತಿಶೀಘ್ರದಲ್ಲೇ ನ್ಯಾಯಾಲಯದಿಂದ ಈ ಎಲ್ಲಾ ನಿರ್ದೇಶಕ ಕುಲ ದ್ರೋಹಿಗಳನ್ನು ಬುದ್ಧಿ ಕಲಿಸುವ ಕಾಲ ಹತ್ತಿರದಲ್ಲೇ ಇದೆ ಎಂಬುದನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು. ಹೀಗೆ ಹೇಳುತ್ತಾ ಹೋದರೆ ಪುಟಗಳು ಸಾಲುವುದಿಲ್ಲ ಮತ್ತೊಮ್ಮೆ ಅವಕಾಶವಾದಾಗ ವಿವರವಾಗಿ ಒಂದಿಷ್ಟು ಹಾಗೆ ಸಮುದಾಯದ ಚಿಂತನೆಯಲ್ಲಿ ಇದನ್ನು ನಾವೆಲ್ಲಾ ತಿಳಿದುಕೊಳ್ಳಬಹುದು.

[ಅಂತಿಮ ನಿರ್ಧಾರ ನಿಮಗೇ ಬಿಟ್ಟಿದ್ದು]

ಆದರೆ ಒಂದನ್ನು ಕುಲಬಾಂಧವರು ಯೋಚಿಸಿ: ನಿಮಗೆ ಹಣ ಮತ್ತು ಮನರಂಜನೆಗೆ ಪ್ರೋತ್ಸಾಹಿಸುವ ಶ್ರೀಮಂತ ನಾಯಕರು ಬೇಕೋ ಅಥವಾ ಸಂಪ್ರದಾಯ ಹಾಗು ನಮ್ಮ ಹಿರಿಯರ ನಿಜವಾದ ಒಕ್ಕಲುತನವನ್ನು ರಕ್ತದಂತೆ ಮೈತುಂಬಿಕೊಂಡು ಎದೆ ಕೊಟ್ಟು ಸಮಾಜದಲ್ಲಿ ನುಗ್ಗಿ ನಿಲ್ಲುವ ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡಿರುವ ರೋಹನ್ ಗೌಡರಂತಹ ವ್ಯಕ್ತಿತ್ವವುಳ್ಳ ಯುವಸಮೂಹ ಬೇಕೋ ಎಂಬುದನ್ನು ಸೂಕ್ಷ್ಮವಾಗಿ ನಿರ್ಧರಿಸಿ.

ನಾಳೆ ಎಂಬುದು ಭವಿಷ್ಯದ ಮಕ್ಕಳಿಗಾಗಿ, ಇದನ್ನು ಮರೆಯದಿರಿ. ನಿಮ್ಮ ಮಕ್ಕಳಿಗೆ ಗೌರವ ಮತ್ತು ಜೀವನವನ್ನು ಕಲ್ಪಿಸುವ ಒಗ್ಗಟ್ಟಿನ ಶಕ್ತಿ ಬೇಕೋ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ಹಣದಿಂದ ನಮ್ಮನ್ನು ಕೊಂಡುಕೊಂಡು ನಮ್ಮ ಮುಂದಿನ ಮಕ್ಕಳನ್ನು ಮಾನಸಿಕವಾಗಿ ವ್ಯವಸ್ಥಿತ ಸ್ವಾಭಿಮಾನ ಹೀನ ಬದುಕಿನಲ್ಲಿ ನೂಕುವುದು ಬೇಕೋ, ಇವುಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ.

ಕುಲಬಾಂಧವರೇ, ಯಾವುದೇ ಹೆಜ್ಜೆಯನ್ನಿಡುವ ಮುನ್ನ ನೂರು ಬಾರಿ ಯೋಚಿಸಿ. ಭವಿಷ್ಯದ ನಮ್ಮ ಮಕ್ಕಳಿಗಾಗಿ, ಅವರ ಸ್ವಾಭಿಮಾನದ ಬದುಕಿಗಾಗಿ ನಾವು ಒಗ್ಗೂಡಲೇಬೇಕು. ಬನ್ನಿ, ಕೈಜೋಡಿಸೋಣ, ನಮ್ಮ ಸಮುದಾಯದ ಒಗ್ಗಟ್ಟಿನ ಶಕ್ತಿಯನ್ನು ಇಡೀ ನಾಡಿಗೆ ತೋರಿಸೋಣ.

ಜೈ ನಾಡಪ್ರಭು ಕೆಂಪೇಗೌಡ! ಜೈ ಕಾಲಭೈರವೇಶ್ವರ! ಜೈ ಒಕ್ಕಲಿಗ ಸಮುದಾಯ!

  • Author- AGS for Rohan Gowda

Connect

Join the conversation with Rohan Gowda

Contact

Follow

hello@rohangowda.com

+91 9513 369 356

© 2026. All rights reserved.