ವಿಶೇಷ ವರದಿ: ಸಂವಿಧಾನದ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಾನತೆಯ ಹಾದಿ – ಒಂದು ವಿಶ್ಲೇಷಣೆ
ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರೆ ನಮ್ಮ ದೇಶದ ಸಂವಿಧಾನ ಮತ್ತು ವಾಕ್ ಸ್ವಾತಂತ್ರ್ಯ. ಆದರೆ, ಈ ಸ್ವಾತಂತ್ರ್ಯವನ್ನು ಸಮಾಜದ ಐಕ್ಯತೆಗಾಗಿ ಹೇಗೆ ಬಳಸಬೇಕು? ವೈಯಕ್ತಿಕ ಸ್ವಾರ್ಥ, ಜಾತಿ ಆಧಾರಿತ ಸಂಘಟನೆಗಳು ಮತ್ತು ಕೇವಲ ವ್ಯಕ್ತಿನಿಷ್ಠೆಯಿಂದ ರಾಷ್ಟ್ರ ಬೆಳೆಯಲು ಸಾಧ್ಯವೇ? ಈ ಬ್ಲಾಗ್ ಲೇಖನದಲ್ಲಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ನೈಜ ಚಿಂತನೆಗಳು, ಮೀಸಲಾತಿಯ ಪೂರ್ಣ ಆಶಯ, ಕಾರ್ಯಾಂಗದ ಜವಾಬ್ದಾರಿ ಹಾಗೂ 'ತಪ್ಪಿತಸ್ಥ ವ್ಯಕ್ತಿ ಹೊರತು ಸಮಾಜವಲ್ಲ' ಎಂಬ ವೈಚಾರಿಕ ಸತ್ಯದ ಕುರಿತು ಆಳವಾಗಿ ವಿಶ್ಲೇಷಿಸಲಾಗಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕಾದ ನೈಜ ಸಮಾನತೆಯ ಹಾದಿಯ ಕುರಿತು ತಿಳಿಯಲು ಪೂರ್ಣ ಲೇಖನವನ್ನು ಓದಿ.
Rohan Gowda
9/2/20261 min read


ವಿಶೇಷ ಸುದ್ದಿ ಪ್ರತಿನಿಧಿಯಿಂದ:
ದೇಶದ ಸಾರ್ವಜನಿಕ ವಲಯದಲ್ಲಿ ಇಂದು ಸಂವಿಧಾನಿಕ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ಸಾಲುಗಳು ಹೀಗಿವೆ:
"ಇದನ್ನೇ ಹೇಳುವುದು ನಮ್ಮ ದೇಶದ ಸಂವಿಧಾನದ ಶಕ್ತಿ, ವಾಕ್ ಸ್ವಾತಂತ್ರ...
ನಮ್ಮ ದೇಶದಲ್ಲಿ ಶ್ರೀ ರಾಮನ ಬಗ್ಗೆ ಅನೇಕರು ಮಾತನಾಡುತ್ತಾರೆ ಅದೇ ರೀತಿ ದೇವರೇ ಇಲ್ಲ ಎಂಬ ಮಾತುಗಳನ್ನು ಆಡುತ್ತಾರೆ, ಆದರೆ ಸತ್ಯದ ಹಾದಿಯಲ್ಲಿ ಸತ್ಯವನ್ನು ಅರಿತು ಮಾತನಾಡಿದಾಗ ಮಾತ್ರ ದೇಶವು ಮುನ್ನಡೆಯುತ್ತದೆ, ಜೊತೆಗೆ ಅಂಬೇಡ್ಕರ್ ರವರು ಹಿಂದೆ ಹೇಳಿರುವ ಸಾಕ್ಷಿಭೂತ ಹೇಳಿಕೆ ವ್ಯಕ್ತಿನಿಷ್ಠೆ ಬಿಟ್ಟಾಗ ಮಾತ್ರ ರಾಷ್ಟ್ರ ಬೆಳೆಯುತ್ತದೆ ಎಂದು, ಆದರೆ ಕೆಲವರು ಅವರ ಪುತ್ತಳಿಯನ್ನೇ ಇಟ್ಟು ಅವರ ಚಿಂತನೆಯ ವಿರುದ್ಧವೇ ಸಂಘ ಕಟ್ಟುತ್ತಾರೆ, ಇದನ್ನು ಏನೆಂದು ಹೇಳಬೇಕು?
ಶಾಶ್ವತ ದಲಿತರು ಯಾರು ಇಲ್ಲ, ದಲಿತರನ್ನು ಹಿಂದುಳಿದ ವರ್ಗ SC ST ಎಂದು ಗುಂಪುಗಳನ್ನು ಮಾಡಿ ಸೇರಿಸಿರುವ ಉದ್ದೇಶ ಮತ್ತು ಮೀಸಲಾತಿಯ ಪೂರ್ಣ ಉದ್ದೇಶ ಏನೆಂದರೆ, ಅವರು ಹಿಂದುಳಿದಿರುವ ಭಾವನೆಯಿಂದ ಆಚೆ ಬಂದು ಸಮಾಜದಲ್ಲಿ ಸಮಾನತೆಯಿಂದ ನಾವೆಲ್ಲರೂ ಭಾರತೀಯರು ಎಂದು ಬದುಕಲು ಅವಕಾಶ ಕಲ್ಪಿಸಿ ಭಾರತೀಯತೆಯನ್ನು ಎತ್ತಿ ಹಿಡಿಯಲು ಐಕ್ಯತೆಯನ್ನು ಬೆಳೆಸಲು ಮಾಡಿರುವ ಒಂದು ವ್ಯವಸ್ಥೆ, ಆದರೆ ಕೆಲವರು ವಿದ್ಯಾಭ್ಯಾಸ ಅಥವಾ ಜ್ಞಾನದ ಕೊರತೆಯಿಂದ ನಾವು ದಲಿತರು ಮತ್ತು ಕೆಲವು ಜಾತಿಯ ಭಾವನೆಗಳಲ್ಲಿ ತಮ್ಮ ಜಾತಿಯ ವಿಚಾರವಾಗಿ ಯಾರೂ ಬರಬಾರದು, ದಲಿತರು ಎಂದರೆ ನಮ್ಮದೇ ಪೇಟೆಂಟ್ ಇರಬೇಕು ಎಂದು ಹೇಳುತ್ತಾರೆ, ಇದೊಂದು ರಾಷ್ಟ್ರ ದ್ರೋಹಿ ಹೇಳಿಕೆ ಎಂಬುದು ಸತ್ಯವೇ ಆದರೂ ಸಹ, ಇದಕ್ಕೆ ಮೂಲ ಕಾರಣ ಅವರಿಗೆ ಸಂಘಟನೆ ಮತ್ತು ಸಂಘಟನೆಯ ಉದ್ದೇಶದ ಜ್ಞಾನ ಇಲ್ಲದಿರುವುದು ಮತ್ತು ಅನೇಕ ಬಾರಿ ವಿದ್ಯಾವಂತರು ಅಥವಾ ಜ್ಞಾನವಂತರು, ಸಮರ್ಪಕ ಸಂವಿಧಾನದ ಮಾಹಿತಿ ಇಲ್ಲದೆ ಮನೋ ಇಚ್ಛೆ, ತಮಗೆ ಅನಿಸಿದ, ಮನಸ್ಸಿಗೆ ಹಿತ ಎನಿಸಿದ, ಎಲ್ಲವೂ- ಅದೇ ನ್ಯಾಯ ಎಂದು ನಂಬಿ ಅಮಾಯಕ ಜನರನ್ನು ಒಟ್ಟುಗೂಡಿಸಿ ಗುಂಪುಗಾರಿಕೆ ಮಾಡಿದಾಗ ಅದನ್ನೇ ಸಂವಿಧಾನ ಎಂದು ಮೂಢರಂತೆ ನಂಬಿರುತ್ತಾರೆ.
ವಾಸ್ತವದಲ್ಲಿ ಸಂವಿಧಾನ ಹಾಳಾಗಲು ಪ್ರತಿಯೊಬ್ಬ ಭಾರತೀಯ ಪ್ರಜೆಯ ಬೇಜವಾಬ್ದಾರಿ, ಅಂದರೆ ಅದರಲ್ಲೂ ಪ್ರಥಮ ಬೇಜವಾಬ್ದಾರಿ ಎಂದರೆ ಅಡ್ಜಸ್ಟ್ ಮಾಡಿಕೊಳ್ಳುವುದು ಇದರಿಂದ ಶಾಸನಬದ್ಧ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ವ್ಯವಸ್ಥೆ ಹದಗಿಡುವುದು ಖಚಿತ, ನನ್ನ ಅನುಭವದಲ್ಲೇ ಒಬ್ಬ ಆಡಳಿತದ ಅಧಿಕಾರಿ ಹೇಳುತ್ತಾನೆ ನೀವು ಕೇಸ್ ಗಳನ್ನು ಹಾಕುತ್ತಾ ಹೋದರೆ ಜೀವನ ನಡೆಯುವುದಿಲ್ಲ ಮತ್ತು ಎಲ್ಲೆಡೆ ಕೇಸುಗಳೆ ಹಾಕುತ್ತಾ ಸಮಾಜ ಕೇಸ್ ಗಳಲ್ಲಿ ಇರುತ್ತದೆ ಎಂದು! ಹೇಳುವುದಾದರೆ ಇದು ಪ್ರಜಾಪ್ರಭುತ್ವದಲ್ಲಿ ನಮ್ಮ ಸಂವಿಧಾನದ ಹಾಡು ಹಗಲಿನ ಸಮಯದಲ್ಲಿ ಮಾಡುವ ಕಗ್ಗೊಲೆ ಎಂದು ಹೇಳಬಹುದು... ಏಕೆಂದರೆ ಅವನ ಭಾರತ ದೇಶದ ನಿಷ್ಠೆಯ ಜವಾಬ್ದಾರಿಯಾಗಿ ಕಾರ್ಯಾಂಗದಲ್ಲಿ ಅವನು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನ್ಯಾಯವನ್ನು ಕಲ್ಪಿಸಲು ಯಾವುದೇ ಕಾರಣಕ್ಕೂ ಮುಲಾಜಿಲ್ಲದೆ ಕಾನೂನು ಕಾಯ್ದೆಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು, ಆಗ ಸಂವಿಧಾನದ ಮೇಲೆ ನಂಬಿಕೆ ಬರುತ್ತದೆ ಏಕೆಂದರೆ ಸಂವಿಧಾನ ಎಂದರೆ ಒಂದು ಪುಸ್ತಕವಲ್ಲ, ಅಥವಾ ಭಾವನೆಯು ಅಲ್ಲ, ಅಥವಾ ಆಯುಧವೂ ಅಲ್ಲ, ಅದೊಂದು ವ್ಯವಸ್ಥೆಯ ನಂಬಿಕೆಗೆ, ಐಕ್ಯತೆಯ ಬುನಾದಿಗೆ ಸಂಪರ್ಕಿಸುವ ಒಂದು ವ್ಯವಸ್ಥೆ. ಅದನ್ನು ಹದಗೆಡಿಸಲು ಯಾರು ಪ್ರೋತ್ಸಾಹಿಸಬಾರದು, ತದನಂತರ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಗಳನ್ನು ಕಟ್ಟಿಕೊಂಡಿರುವ ಅನೇಕರಲ್ಲಿ ಕೆಲವರು ಸಂವಿಧಾನದ ಪ್ರಮುಖ ಅಂಶಗಳನ್ನು ಅರಿತೆ ಇರುವುದಿಲ್ಲ ಮತ್ತು ಸಂಘಟನೆಯನ್ನೇ ಜೀವನಾಧಾರ ಮಾಡಿಕೊಂಡಿರುತ್ತಾರೆ, ವೃತ್ತಿಗೂ ಪ್ರವೃತ್ತಿಗೂ ವ್ಯತ್ಯಾಸ ತಿಳಿಯದ ಇಂತಹ ಜನರಿಂದ ಸಮಾಜಕ್ಕೆ ಬಹಳ ತೊಂದರೆ ಇದೆ, ಎಂಬುದನ್ನು ಸಮಾಜ ತಿಳಿಯಬೇಕು ಮತ್ತು ಇನ್ನು ಕೆಲವರು 20 ಅಥವಾ 30 ವರ್ಷಗಳಾದರೂ ಹಳೆಯ ವಿಷಯಗಳನ್ನು ಹೇಳಿಕೊಂಡು ಸಮಾನತೆ ಇಲ್ಲ ಎಂದು ಹೇಳುತ್ತಾರೆ, ಮತ್ತು ಸಂಘಟನೆಗಳನ್ನು ನಡೆಸುತ್ತಾರೆ, ಆದರೆ ನಿಜವಾದ ಸತ್ಯ ನಿಷ್ಠೆ ಇರುವ ಭಾರತೀಯರಾದರೆ ಅವರಿಗೆ ಸಮಾನತೆ ಎಲ್ಲಿ ಸಿಕ್ಕಿರುವುದಿಲ್ಲ ಅಂತಹವರ ಮೇಲೆ ಮುಲಾಜಿಲ್ಲದೆ ಸಂವಿಧಾನದ ಅಳವಡಿಕೆಯನ್ನು ಏರಿಸಬೇಕು ಮತ್ತು ಎಲ್ಲಿ ಅಸ್ಪೃಶ್ಯತೆ ಅಥವಾ ಇನ್ನು ಉಳಿದ ಅಜ್ಞಾನದ ಮತ್ತು ಅಂಧಕಾರದ ವ್ಯವಸ್ಥೆಯಲ್ಲಿನ ಆಚರಣೆಗಳು ಕಂಡು ಬಂದಲ್ಲಿ ಅಂತಹ ಪರಿಸ್ಥಿತಿಯಲ್ಲಿ ಕಾರ್ಯೊನ್ಮುಖರಾಗಿ ಅಲ್ಲಿನ ಜನರಿಗೆ ಜ್ಞಾನವನ್ನು ತುಂಬಿ ಸರಿಪಡಿಸಬೇಕು, ಅಥವಾ ಕಾನೂನಿನ ಸಲಹೆ ಪಡೆದು ಸಂವಿಧಾನವನ್ನು ಎತ್ತಿ ಹಿಡಿಯಬೇಕು, ಅದನ್ನು ಬಿಟ್ಟು ಸವರ್ಣಿಯರು ಸರಿ ಇಲ್ಲ, ಮೇಲ್ಜಾತಿಯವರು ಸರಿ ಇಲ್ಲ, ಇಡೀ ಸಮಾಜ ಸರಿ ಇಲ್ಲ, ದೇವರನ್ನು ಪೂಜಿಸುವವರು ಸರಿ ಇಲ್ಲ, ಎಂಬಂತಹ ಮಾತುಗಳನ್ನು ಹೇಳುತ್ತಾ ಅಮಾಯಕ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಅನೇಕ ಕಡೆ ನಡೆಯುತ್ತಲೇ ಇದೆ, ಒಂದು ಪಕ್ಷದಲ್ಲಿ ಒಬ್ಬ ಕಳ್ಳ ಎದ್ದರೆ ಕಳ್ಳನನ್ನು ಹೆಸರು ಹಿಡಿದು ಅವನ ಪರಿವರ್ತನೆಗೆ ಶಿಕ್ಷೆ ವಿಧಿಸಬೇಕು ಮತ್ತು ಒಂದು ಊರಿನಲ್ಲಿ ಕಳ್ಳನಿದ್ದರೆ ಇಡೀ ಊರನ್ನು ಕಳ್ಳ ಅಥವಾ ಕಳ್ಳರ ಊರು ಎಂದು ಕರೆಯುವುದು ಎಷ್ಟು ಸರಿ? ಅದು ಯಾವುದೇ ಜಾತಿ ಇರಲಿ ಯಾವುದೇ ಧರ್ಮವಿರಲಿ ತಪ್ಪಿತಸ್ಥ ವ್ಯಕ್ತಿ ಇರುತ್ತಾನೆ ಹೊರತು ತಪ್ಪಿತಸ್ಥ ಸಮಾಜವಲ್ಲ, ಎಂಬ ಕನಿಷ್ಠ ಜ್ಞಾನ ಪ್ರತಿಯೊಬ್ಬ ಸಂಘಟಕರಲ್ಲೂ ಇರಬೇಕು.
ಈಗಾಗಲೇ ದೇಶದಲ್ಲಿ ಐಕ್ಯತೆ ಸಾಧಿಸುವುದು ಕಷ್ಟ ಎಂಬಂತಹ ಪರಿಸ್ಥಿತಿ ಮೂಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಅನುಚಿತ ಸಂಘಟನಾ ಪ್ರವರ್ತನೆಗಳನ್ನು ಭಾರತದ ನಿಷ್ಠೆಯ ಕಾರ್ಯಾಂಗ ಸೂಕ್ಷ್ಮವಾಗಿ ಗ್ರಹಿಸಿ ಮಟ್ಟ ಹಾಕಬೇಕು. ದೇವರ ಮೇಲೆ ಅವಹೇಳನ ಮಾಡುವ ಅನೇಕರು ಇಂದು ಮೆರೆದಾಡಲು ಕಾರಣ ಅವರ ಮೇಲೆ ಕಾನೂನಿನ ಸಂವಿಧಾನಿಕ ಅಳವಡಿಕೆಯನ್ನು ಹೇರದಿರುವುದು, ಇಂತಹ ಕೆಲವರು ಸಮಾಜದಲ್ಲಿ ಮತ್ತೊಬ್ಬರ ಭಾವನೆಗಳಿಗೆ ಬೆಲೆ ಕೊಡದೆ ಅಹಂಕಾರ ಮತ್ತು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅಥವಾ ರೋಲ್ ಕಾಲ್ಗಳಿಗಾಗಿ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ ನಡೆದುಕೊಂಡಾಗ ಅವರ ಮೇಲೆ ಮುಲಾಜಿಲ್ಲದೆ ಕಾನೂನಿನ ರೀತಿ ಕೇಸ್ ಗಳನ್ನು ಹಾಕಲು ಎಲ್ಲಾ ವ್ಯವಸ್ಥೆಯು ಪೂರಕವಾಗಿರುತ್ತದೆ, ಎಂಬುದನ್ನು ಸಮಾಜ ಮರೆಯಬಾರದು ಮತ್ತು ಅವರಿಗೆ ಶಿಕ್ಷೆ ಕೊಡಿಸುವವರೆಗೂ ಬಿಡಬಾರದು.
ಸರ್ವೇಸಾಮಾನ್ಯವಾಗಿ ಅನೇಕ ಬಾರಿ ಇಂತಹ ವಿಷಯಗಳಲ್ಲಿ ಕೇವಲ ಸಂಘಟನೆಗಳ ದೌರ್ಜನ್ಯದ ಪ್ರವೃತ್ತಿಯನ್ನು ಗ್ರಹಿಸಿ ಪರಸ್ಪರ ರಾಜಿ ಮಾಡಿಕೊಳ್ಳುತ್ತಾರೆ... ಇದು ಸಹ ಒಂದು ರೀತಿಯ ಸಂವಿಧಾನಿಕ ದ್ರೋಹ! ಏನೇ ನಡೆದರೂ ಅದು ಸಂವಿಧಾನಿಕವಾಗಿ ಲಿಖಿತ ರೂಪದಲ್ಲಿ ಕಾರ್ಯಾಂಗದ ಗಮನಕ್ಕೆ ಬರಲೇಬೇಕು, ಇದರಿಂದ ಮಾತ್ರ ಭಾರತದ ಶ್ರೇಷ್ಠತೆಗೆ ಒಳ್ಳೆಯ ಬುನಾದಿ ಹಾಕಲು ಸಾಧ್ಯ.
ಈಗಲೂ ಸಹ ಅನೇಕರು ಸಂವಿಧಾನವನ್ನು ಓದಿ ಸಂವಿಧಾನದಿಂದಲೇ ನಾವೆಲ್ಲರೂ ಕಾಪಾಡಲ್ಪಟ್ಟಿದ್ದೇವೆ ಎಂದು ಹೇಳುತ್ತಾರೆ, ಆದರೆ ಸರ್ಕಾರಿ ಜಾಗಗಳಲ್ಲಿ ಪುತ್ತಳಿಗಳನ್ನು ಇಡಲು ಹೋರಾಟ ಕೂಡ ಮಾಡುತ್ತಾರೆ ಮತ್ತು ಇದಕ್ಕೆ ಪೂರಕವಾಗಿ ಕೆಲವು ಜಾತಿಯ ಭಾವನೆಯುಳ್ಳ ಅಧಿಕಾರಿಗಳು ಶಾಮಿಲಾಗುತ್ತಾರೆ, ಇದರಿಂದ ಐಕ್ಯತೆ ಬರಲು ಬಹಳ ಕಷ್ಟ ಮತ್ತು ಐಕ್ಯತೆಗೆ ಇದು ಮಹಾಮಾರಿ.
ನಮ್ಮ ದೇಶ ರಾಷ್ಟ್ರ ನಿಷ್ಠೆಯಿಂದ ಕೂಡಿರುವ ದೇಶ ಮತ್ತು ಅನೇಕ ಹಿಂದಿನ ನಾಯಕರು ಮತ್ತು ಹೋರಾಟಗಾರರು ತ್ಯಾಗಿಗಳು, ತಮ್ಮ ವೈಯಕ್ತಿಕ ಹೆಸರಿಗಾಗಿ ಏನನ್ನು ಮಾಡಿಲ್ಲ. ಬದಲಿಗೆ ಅವರು ಮಾಡಿರುವುದು ಭಾರತದ ಭವ್ಯತೆಗಾಗಿ, ಇಂದು ನಾವೆಲ್ಲರೂ ಆ ನಾಯಕರುಗಳ ಹೆಸರನ್ನು ಇಟ್ಟುಕೊಂಡು ಭಾರತದ ಭವ್ಯತೆಯನ್ನು ಐಕ್ಯತೆಯನ್ನು ಕಾಪಾಡುವ ಬದಲು, ವ್ಯಕ್ತಿನಿಷ್ಠೆಗೆ ಸೀಮಿತರಾಗಿರುವುದು ಬಹಳ ದಾರಿದ್ರ ಪೂರಿತ ಆಲೋಚನೆಗಳ ನಡೆಯೆಂದು ಎಂಬುದನ್ನು ನಾವು ಅರಿತುಕೊಳ್ಳಬೇಕು...
ಸಂವಿಧಾನದ ಮೂಲ ಆಶಯ ಮತ್ತು ಪ್ರಸ್ತುತ ಸವಾಲುಗಳು
ಈ ಮೇಲಿನ ಹೇಳಿಕೆಗಳು ಪ್ರಜಾಪ್ರಭುತ್ವದ ಮೂಲ ಬುನಾದಿಯಾದ ಸಂವಿಧಾನ, ಕಾನೂನಿನ ಚೌಕಟ್ಟು ಮತ್ತು ನಾಗರಿಕರ ಜವಾಬ್ದಾರಿಗಳ ಕುರಿತು ಆಳವಾದ ಚಿಂತನೆಗೆ ಹಾದಿಮಾಡಿಕೊಟ್ಟಿವೆ.
ಭಾರತೀಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನಗೆ ಅನಿಸಿದ್ದನ್ನು ವ್ಯಕ್ತಪಡಿಸುವ ವಾಕ್ ಸ್ವಾತಂತ್ರ್ಯವಿದೆ. ಆದರೆ, ಈ ಸ್ವಾತಂತ್ರ್ಯವು ಸಮಾಜದ ಐಕ್ಯತೆ ಮತ್ತು ರಾಷ್ಟ್ರದ ಪ್ರಗತಿಗೆ ಪೂರಕವಾಗಿರಬೇಕೇ ಹೊರತು, ವೈಯಕ್ತಿಕ ಸ್ವಾರ್ಥ ಅಥವಾ ಸಮಾಜವನ್ನು ಒಡೆಯುವ ಆಲೋಚನೆಗಳಿಗೆ ಬಳಕೆಯಾಗಬಾರದು ಎಂಬುದು ಬುದ್ಧಿಜೀವಿಗಳ ಅಭಿಪ್ರಾಯವಾಗಿದೆ.
ಪ್ರಮುಖ ಮುಖ್ಯಾಂಶಗಳು:
ವ್ಯಕ್ತಿನಿಷ್ಠೆಗಿಂತ ರಾಷ್ಟ್ರನಿಷ್ಠೆ ಮುಖ್ಯ: ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳಂತೆ, ಯಾವುದೇ ಒಬ್ಬ ವ್ಯಕ್ತಿ ಅಥವಾ ನಾಯಕನ ಆರಾಧನೆಗಿಂತ ದೇಶದ ಏಳಿಗೆ ಮತ್ತು ಸಮಾನತೆಯೇ ಅಂತಿಮ ಗುರಿಯಾಗಿರಬೇಕು.
ಕಾರ್ಯಾಂಗದ ಪಾರದರ್ಶಕತೆ: ಕಾನೂನು ಅನುಷ್ಠಾನದಲ್ಲಿ ಯಾವುದೇ ರೀತಿಯ ಸಂಪ್ರದಾಯಿಕ 'ಅಡ್ಜಸ್ಟ್‌ಮೆಂಟ್'ಗೆ ಆಸ್ಪದ ನೀಡದೆ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯು ಕಟ್ಟುನಿಟ್ಟಾಗಿ ಕಾನೂನನ್ನು ಎತ್ತಿಹಿಡಿಯಬೇಕು.
ಜಾತಿ ರಹಿತ ಸಮಾನ ಸಮಾಜ: ಮೀಸಲಾತಿ ಮತ್ತು ಸಾಮಾಜಿಕ ಕಾಯ್ದೆಗಳ ಮೂಲ ಉದ್ದೇಶ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವುದೇ ಹೊರತು, ಜಾತಿ ಆಧಾರಿತ ಸಂಘಟನೆಗಳನ್ನು ಜೀವನಾಧಾರ ಮಾಡಿಕೊಳ್ಳುವುದಲ್ಲ.
ವ್ಯಕ್ತಿಗತ ತಪ್ಪು ಮತ್ತು ಸಮಾಜ: ಯಾವುದೇ ಸಮಾಜದಲ್ಲಿ ತಪ್ಪು ಮಾಡಿದ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಬೇಕೇ ವಿನಃ ಇಡೀ ಜಾತಿನಿಂದನೆ ಅಥವಾ ಸಮಾಜವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ.
ಸಂವಿಧಾನ ಎಂಬುದು ಕೇವಲ ಪುಸ್ತಕವಲ್ಲ, ಅದು ದೇಶದ ಐಕ್ಯತೆ ಮತ್ತು ಪ್ರತಿಯೊಬ್ಬ ಭಾರತೀಯನ ನಂಬಿಕೆಯ ಸಂಕೇತ. ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿಯಿಂದ ವರ್ತಿಸಿದಾಗ ಮಾತ್ರ ಭಾರತದ ಭವ್ಯತೆ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯ.