ಸಜ್ಜೆಪಾಳ್ಯದ ಪವಿತ್ರ ಹೋರಾಟಕ್ಕೆ ಕುಲದ್ರೋಹಿಯ ಕಳಂಕ: ಕೇಂದ್ರ ರೈಲ್ವೆಯಿಂದ ವಜಾಗೊಂಡಿರುವ ವಂಚಕನಿಂದ ದೂರವಿರಿ
ಈ ಲೇಖನವು ಸಜ್ಜೆಪಾಳ್ಯ ಭೂ ಹೋರಾಟದ ನೆಪದಲ್ಲಿ ಸಂಘಟನೆಗಳಿಗೆ ನುಸುಳಿ ವಂಚಿಸುತ್ತಿರುವ 'ರೈಲ್ವೆ ಡ್ಯಾಶ್ ಅಣ್ಣ' ಎಂಬ ವ್ಯಕ್ತಿಯ ನಿಜಬಣ್ಣವನ್ನು ಬಯಲು ಮಾಡುವ ಜಾಗೃತಿ ಲೇಖನವಾಗಿದೆ. ಕೇಂದ್ರ ರೈಲ್ವೆ ಇಲಾಖೆಯಿಂದ ತಪ್ಪು ನಡವಳಿಕೆಗಾಗಿ ಶಾಶ್ವತವಾಗಿ ವಜಾಗೊಂಡಿರುವ (Dismissed) ಈ ವ್ಯಕ್ತಿ, ತನ್ನ ವಾಚಾಳಿ ಬುದ್ಧಿಯಿಂದ ಹೋರಾಟಗಾರನಂತೆ ನಟಿಸುತ್ತಾ ಸ್ವಾರ್ಥಕ್ಕಾಗಿ 'ರೋಲ್ ಕಾಲ್' ಮಾಡುತ್ತಿದ್ದಾನೆ. ಸಜ್ಜೆಪಾಳ್ಯದ ಪವಿತ್ರ ಹೋರಾಟವನ್ನು ಹಾಗೂ ಸಮುದಾಯದ ವೇದಿಕೆಗಳನ್ನು ಇಂತಹ ಕುಲದ್ರೋಹಿಗಳಿಂದ ರಕ್ಷಿಸಲು ಮತ್ತು ಮಠಾಧೀಶರು ಹಾಗೂ ಸಂಘಟನಾಕಾರರು ಇವನ ಹಿನ್ನೆಲೆ ತಿಳಿಯದೆ ವೇದಿಕೆ ಅಥವಾ ಮೈಕ್ ನೀಡಿ ಮುಜುಗರಕ್ಕೆ ಈಡಾಗದಂತೆ ಎಚ್ಚರವಹಿಸಲು ಈ ವಿವರಣೆ ಜಾಗೃತಿ ಮೂಡಿಸುತ್ತದೆ...
Rohan Gowda
10/5/20261 min read


ಎಚ್ಚರಿಕೆ: ಹೋರಾಟದ ಸೋಗಿನಲ್ಲಿರುವ ಮಹಾವಂಚಕನ ಬಣ್ಣ ಬಯಲು!
ಕೇಂದ್ರ ರೈಲ್ವೆ ಇಲಾಖೆಯಿಂದ 'ಡಿಸ್ಮಿಸ್' (Dismissed) ಆದ ಕುಲದ್ರೋಹಿಯ ಬಗ್ಗೆ ಸಮುದಾಯಕ್ಕೆ ಹಾಗೂ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ
ಲೇಖನ/ವರದಿ: ರೋಹನ್ ಗೌಡ (ಡಾ. ರಾಜಕುಮಾರ್ ಅಭಿಮಾನಿ)
ಸಜ್ಜೆ ಪಾಳ್ಯದ ಭೂಮಿಯ ಹೋರಾಟದ ವಿಷಯವಾಗಿ ಸಂಘಟನೆಗಳ ಒಕ್ಕೂಟದಿಂದ ಸದ್ಯ ನಿರ್ಣಾಯಕ ರೂಪರೇಷೆಗಳನ್ನು ಹಾಕಲಾಗುತ್ತಿದೆ. ಆದರೆ, ಈ ಪವಿತ್ರವಾದ ಹೋರಾಟದ ನಡುವೆ ಯಾವುದೇ ಆದಾಯವಿಲ್ಲದೆ, ಕೇವಲ 'ರೋಲ್ ಕಾಲ್' ಮಾಡಿಕೊಂಡು ಹೊಟ್ಟೆಪಾಡು ನಡೆಸುವ, ತಮ್ಮನ್ನು ತಾವು ಹೋರಾಟಗಾರರು ಎಂಬ ಸೋಗಿನಲ್ಲಿ ವೇದಿಕೆಗಳನ್ನು ಹತ್ತುವ ಕುಲದ್ರೋಹಿ ಮತ್ತು ಅಯೋಗ್ಯರನ್ನು ಗುರುತಿಸುವುದು ಇಂದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಸಜ್ಜೆ ಪಾಳ್ಯದ ಇಷ್ಟು ವರ್ಷದ ಸುದೀರ್ಘ ಹೋರಾಟದಲ್ಲಿ ವಾಸ್ತವವಾಗಿ ಯಾರ ಕೊಡುಗೆ ಏನು ಎಂಬುದನ್ನು ಅರಿತು ಮುನ್ನಡೆಯಬೇಕಿದೆ. ಸುಳ್ಳು ಹೇಳುವ ಕುಲದ್ರೋಹಿಗಳನ್ನು ದಯಮಾಡಿ ಯಾರೂ ಪ್ರೋತ್ಸಾಹಿಸಬಾರದು. ಈ ವಿಚಾರವನ್ನು ಪೂಜ್ಯ ಮಠಾಧೀಶರುಗಳು ಸಹ ಗಂಭೀರವಾಗಿ ಅರಿಯಬೇಕಾದ ಅವಶ್ಯಕತೆಯಿದೆ.
ವೇದಿಕೆ ಏರುತ್ತಿರುವ ಅಯೋಗ್ಯರು: ಮಠಾಧೀಶರು ಮತ್ತು ಗಣ್ಯರಿಗೆ ಮುಜುಗರ
ಮೊನ್ನೆಯಷ್ಟೇ ನಡೆದ ಒಂದು ಸುಸಜ್ಜಿತ ಕಾರ್ಯಕ್ರಮದಲ್ಲಿ (ಒಕ್ಕಲಿಗರ ಪರವಾಗಿ ಅಂದು ಪ್ರಾರಂಭಗೊಂಡ ಮೀಸಲಾತಿ ಹೋರಾಟದ ಪ್ರಮುಖರಲ್ಲಿ ಪ್ರಥಮರಾಗಿದ್ದ ಪ್ರಸನ್ನ ಕುಮಾರ್ V ರವರು ಹಾಗೂ ಸದಾಕಾಲ ಸಮುದಾಯದ ಚಿಂತಕರಾಗಿ ಗೌರವ ಹೊಂದಿರುವ ವಕೀಲರಾದ ಡಾ. ಆಂಜಿನಪ್ಪನವರ ವೇದಿಕೆಯಲ್ಲಿ) ಇಂತಹ ಅಯೋಗ್ಯರು ಬಂದು ಸೇರಿಕೊಂಡಿದ್ದರು. ಇಂತಹ ಸೃಜನಶೀಲ ವೇದಿಕೆಗಳಲ್ಲಿ ಸೇರಿಕೊಳ್ಳುವ ಇವರ ಬಗ್ಗೆ ನಾವು ಗಮನ ಹರಿಸಬೇಕು. ಸ್ವಾಮೀಜಿಯವರು ಸಹ ಇಂತಹ ಸೂಕ್ಷ್ಮತೆಯನ್ನು ಅರಿಯಬೇಕು, ಪಾಪ ಇವರ ಹಿನ್ನೆಲೆ ಅರಿಯದೆ ಶ್ರೀಗಳು ಸಹ ಇವರೊಂದಿಗೆ ಮಾತನಾಡುವಂತಾಗಿ ಮುಜುಗರಕ್ಕೆ ಈಡಾಗುವ ಸಾಧ್ಯತೆಗಳಿರುತ್ತವೆ. ಇದು ಮರುಕಳಿಸಬಾರದು.
ಯಾರಿವನು ಈ "ರೈಲ್ವೆ ಡ್ಯಾಶ್ ಅಣ್ಣ"? (ರೈಲ್ವೆ ಇಲಾಖೆಯಿಂದ ಡಿಸ್ಮಿಸ್ ಆದ ವಂಚಕ)
ಸಮಾಜದಲ್ಲಿ ಪರಿಚಿತರಾಗಿರುವ ಇಬ್ಬರು ಅಯೋಗ್ಯರಲ್ಲಿ ಒಬ್ಬನ ಬಗ್ಗೆ ನಾವಿಂದು ಜಾಗೃತಿ ಮೂಡಿಸಲೇಬೇಕಿದೆ (ಮತ್ತೊಬ್ಬ ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವನ ಪರಿಚಯವೂ ಆಗಲಿದೆ). ಈತ ನೋಡಲು ಕುಬ್ಜ, ಆದರೆ ದೊಡ್ಡ ಕಿಲಾಡಿ. ರೈಲ್ವೆ ಇಲಾಖೆಯಲ್ಲಿ ಗುರುತಿಸಿಕೊಂಡಿರುವ ಈತನನ್ನು "ರೈಲ್ವೆ ಡ್ಯಾಶ್ ಅಣ್ಣ" ಎಂದೇ ಕರೆಯುತ್ತಾರೆ.
ವಯಸ್ಸಿನಲ್ಲಿ ಹಿರಿಯ ಎಂದು ನಂಬಿ ಮೊದಲು ನಾನೂ ಸಹ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದೆ. ಆದರೆ, ಆತನ ಸಹವಾಸ ಮಹಾ ಮಾರಕ ಎಂದು ತಿಳಿದ ಕೂಡಲೇ ಸಂಪರ್ಕದಲ್ಲಿದ್ದ ಎಲ್ಲ ಸಂಘಟನೆಗಳಿಗೂ ಎಚ್ಚರಿಕೆ ನೀಡಿದ್ದೇನೆ.
ಅತಿದೊಡ್ಡ ಆಘಾತಕಾರಿ ಸತ್ಯ: ಈತ ರೈಲ್ವೆ ಇಲಾಖೆಯಲ್ಲಿ ಯಾವ ದೊಡ್ಡ ಹೋರಾಟ ಮಾಡಿದ್ದಾನೆ ಎಂದು ವಿಚಾರಣೆ ನಡೆಸಿದಾಗ ತಿಳಿದ ಸತ್ಯವೇನೆಂದರೆ, ಈತ ರೈಲ್ವೆ ಇಲಾಖೆಯಲ್ಲಿ ತಪ್ಪುಗಳನ್ನು ಮಾಡಿ ಸಿಕ್ಕಿಹಾಕಿಕೊಂಡು ಕೆಲಸದಿಂದ ಶಾಶ್ವತವಾಗಿ ವಜಾಗೊಂಡಿರುವ (DISMISSED) ವ್ಯಕ್ತಿ!
ತಪ್ಪುಗಳು ದೃಢೀಕರಣಗೊಂಡ ನಂತರವಷ್ಟೇ ಇಲಾಖೆ ಇಂತಹ ಕಠಿಣ ಕ್ರಮ ಕೈಗೊಳ್ಳುತ್ತದೆ. ಹೀಗೆ ಡಿಸ್ಮಿಸ್ ಆದವರಿಗೆ ಯಾವುದೇ ಪಿಂಚಣಿ (Pension) ಕೂಡ ಸಿಗುವುದಿಲ್ಲ.
ರೈಲ್ವೆ ಕನ್ನಡ ಸಂಘದಲ್ಲೂ ಈತನಿಗೆ ಬಹಳ ಕುಖ್ಯಾತಿಯಿದೆ. ಅನೇಕ ಕಡೆ ರೋಲ್ ಕಾಲ್ ಮಾಡಿ ರೈಲ್ವೆ ಇಲಾಖೆಯಿಂದ ಈತನನ್ನು ಹೊರಹಾಕಲಾಗಿದೆ.
ಸ್ವಾರ್ಥಕ್ಕಾಗಿ ಸಂಘಟನೆಗಳ ದುರ್ಬಳಕೆ ಮತ್ತು ಕೌಟುಂಬಿಕ ಪ್ರಚಾರ
ಯಾವುದೇ ಜೀವನಾಧಾರವಿಲ್ಲದ ಈತ, ಅಲ್ಲಿ ಇಲ್ಲಿ ವೇದಿಕೆಗಳ ಮೇಲೆ ಸುಳ್ಳು ಹೇಳಿ ಲಾಭ ಪಡೆಯುತ್ತಾನೆ. ತಾನು ಯಾರಿಗೆ ಸಿಕ್ಕರೆ ಅವರಿಗೆ ನಂಟ ಎಂದು ಹೇಳಿಕೊಳ್ಳುತ್ತಾ, ಸ್ಪಷ್ಟ ಕನ್ನಡ ಮಾತನಾಡುವ ಮೂಲಕ, ತನ್ನ ವಯಸ್ಸು ಮತ್ತು ವಾಚಾಳಿ ಬುದ್ಧಿಯನ್ನು ಪ್ರದರ್ಶಿಸಿ ಜಾಗ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಸಂಘಟನೆಗಳಲ್ಲಿ ಬಿರುಕು ಮೂಡಿಸಿ, ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನೇ ತನ್ನ ಜೀವನದ ಬಂಡವಾಳ ಮಾಡಿಕೊಳ್ಳುತ್ತಾನೆ.
ಉದಾಹರಣೆಗೆ: ಈ ಹಿಂದೆಯೂ ಕೃಷ್ಣಪ್ಪ ರಂಗಮ್ಮನವರ ಕ್ಯಾಲೆಂಡರ್ನಲ್ಲಿ ತನ್ನ ಕುಟುಂಬದ ಕಂಪನಿಯ ಹೆಸರನ್ನು ಹಾಕಿಕೊಂಡು ಪ್ರಚಾರ ಪಡೆದಿದ್ದು ಮರೆಯುವಂತಹದ್ದಲ್ಲ.
ಭೂಗಳ್ಳರೊಂದಿಗೆ ಶಾಮೀಲು? ಇವೆಲ್ಲವೂ ಆತನ ಹೊಟ್ಟೆಪಾಡು ಎನ್ನಲಾದರೂ, ಸಜ್ಜೆ ಪಾಳ್ಯದ ಹೋರಾಟದ ವಿಚಾರದಲ್ಲೂ ಈತ 'ಭೂಗಳ್ಳರ' ಜೊತೆ ಶಾಮೀಲಾಗಿರುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ನಾವು ಎಚ್ಚೆತ್ತುಕೊಳ್ಳಲೇಬೇಕಿದೆ. ಇಂತಹ ಮಹತ್ತರ ಹೋರಾಟದಲ್ಲಿ ವಿಷಜಂತುಗಳಂತೆ ಜೊತೆಗಿದ್ದು ದ್ರೋಹ ಬಗೆಯುವ ಇಂತಹ ಕುನ್ನಿಗಳ ಬಗ್ಗೆ ಜಾಗೃತಿ ಇರಲೇಬೇಕು.
ವ್ಯಕ್ತಿತ್ವ ಮತ್ತು ಸ್ವಾಭಿಮಾನವೇ ಮೂಲಶಕ್ತಿ (ಒಂದು ತುಲನೆ)
ನನ್ನ ಹೆಸರು ರೋಹನ್ ಗೌಡ. ನಾನೊಬ್ಬ ಸಾಮಾನ್ಯ ಡಾ. ರಾಜಕುಮಾರ್ ಅಭಿಮಾನಿ. ಉದಾಹರಣೆಗೆ, ನಾನು ಓದಿರುವುದು ಕೇವಲ ನಾಲ್ಕನೇ ತರಗತಿ ಎಂದೇ ಅಂದುಕೊಳ್ಳಿ; ಆದರೆ ನನ್ನ ಇಡೀ ವಿದ್ಯಾರ್ಥಿ ಜೀವನದಲ್ಲಾಗಲೀ ಅಥವಾ ವೃತ್ತಿಪರ ಜೀವನದಲ್ಲಾಗಲೀ ನನ್ನ 'ನಡವಳಿಕೆಯ ದೋಷದಿಂದ' ಯಾರು ನನ್ನನ್ನು ಕೆಲಸದಿಂದಾಗಲೀ, ಶಾಲೆಯಿಂದಾಗಲೀ ಹೊರಗೆ ಎಸೆದಿಲ್ಲ (ಡಿಸ್ಮಿಸ್ ಮಾಡಿಲ್ಲ). ಮಾರ್ಕ್ಸ್ ಏರುಪೇರಾಗಿದ್ದರೂ, ಇಂದಿಗೂ ನನ್ನ ಗುರುಗಳು, ಪ್ರಾಂಶುಪಾಲರು ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಎಲ್ಲೂ ನಮ್ಮನ್ನು 'ಅಯೋಗ್ಯ' ಎಂದು ಹೊರಹಾಕಿಲ್ಲ.
ಸಮಾಜಕ್ಕೆ ಬೇಕಿರುವುದು ಸತ್ಯನಿಷ್ಠೆ ಮತ್ತು ಮೌಲ್ಯಯುಕ್ತ ಸ್ವಾಭಿಮಾನದ ವ್ಯಕ್ತಿತ್ವ. ಆದರೆ ಈ ಡಿಸ್ಮಿಸ್ ಆದ ವ್ಯಕ್ತಿಗೆ ಇವೆರಡೂ ಇಲ್ಲ.
ಕುತಂತ್ರಿಗಳ ಬೆದರಿಕೆಗಳಿಗೆ ಸೊಪ್ಪು ಹಾಕದಿರಿ (ಕಾನೂನು ಕ್ರಮದ ಎಚ್ಚರಿಕೆ)
ಇಂತಹ ಕುಲದ್ರೋಹಿಗಳು ಬಹಳ ವಾಚಾಳಿಗಳಿರುತ್ತಾರೆ. ಸಂಘಟನಾಕಾರರು ಇವರ ಬಣ್ಣ ಬಯಲು ಮಾಡಿದರೆ, ಕೂಡಲೇ ಅವರ ವೈಯಕ್ತಿಕ ವಿಚಾರಗಳಿಗೆ ಇಣುಕಿ, ಸಮಾಜದಲ್ಲಿ ತಪ್ಪು ಸಂದೇಶಗಳನ್ನು ಹರಡುವುದರಲ್ಲಿ ಇವರು ನಿಸ್ಸೀಮರು. ಹಂದಿಗಳಿಗೆ ಕಾನೂನಿನ ರಕ್ಷಣೆ ಯಥೇಚ್ಛವಾಗಿ ಇರುತ್ತದೆ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ.
ಕಾನೂನಿನ ಕುಣಿಕೆ: ಈ ವ್ಯಕ್ತಿಯು ಮೈಸೂರಿನಲ್ಲಿರುವ ಸಂಘಟನಾಕಾರರ ವಿಚಾರದಲ್ಲೂ ಇದೇ ರೀತಿ ಮಾಡಿ, ಇದೀಗ ಅವರು ಕಾನೂನು ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ.
ಅಲ್ಲದೆ, ಈತ ಮಾಡಿದ ಮತ್ತೊಂದು ವೈಯಕ್ತಿಕ ಮಾನನಷ್ಟ (Defamation) ವಿಚಾರವಾಗಿ ಆತನ ಮನೆಗೆ ಹತ್ತಿರವಿರುವ ಗಣಪತಿ ನಗರಕ್ಕೆ ಹೊಂದಿಕೊಂಡಿರುವ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ನಮ್ಮ ಒಕ್ಕೂಟವು ಕಾನೂನು ಕ್ರಮ ಜರುಗಿಸಲು ಮತ್ತು ಆತನಿಗೆ ಕಾನೂನಿನ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ.
ಸಂಘಟನೆಗಳಿಗೆ ನನ್ನ ಕಳಕಳಿಯ ಮನವಿ:
ಯಾರೇ ಆಗಲಿ, ನಿಮ್ಮ ಜೊತೆ ಸೇರುವ ವ್ಯಕ್ತಿಯ ಹಿನ್ನೆಲೆಯನ್ನು ಎರಡು ಬಾರಿ ಕಡ್ಡಾಯವಾಗಿ ವಿಚಾರಿಸಿ. ತಮ್ಮ ವೃತ್ತಿಯಲ್ಲಿ ಅಯೋಗ್ಯ ಎಂದು ದೃಢೀಕರಣಗೊಂಡು 'ಡಿಸ್ಮಿಸ್' ಆಗಿರುವ ಇಂತಹ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ವೇದಿಕೆಗಳ ಮೇಲೆ ಆಮಂತ್ರಿಸಬೇಡಿ ಮತ್ತು ಅವರ ಕೈಗೆ ಮೈಕ್ ನೀಡಬೇಡಿ. ಇದರಿಂದ ನಿಜವಾದ ಸಂಘಟನಾಕಾರರಿಗೆ ಅನ್ಯಾಯವಾಗುತ್ತದೆ.
ಸಮಾಜದಲ್ಲಿ ಇಂತಹವರು ಅನೇಕರಿರುತ್ತಾರೆ. ನಾವು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ನಾಡಪ್ರಭು ಕೆಂಪೇಗೌಡರ ಅಸ್ಮಿತೆಗಳನ್ನು ಅನುಸರಿಸುವ ನಿಟ್ಟಿನಲ್ಲಿ ಯಾರು ಅಡ್ಡಿ ಬಂದರೂ ಎದೆಗುಂದದೆ ಮುನ್ನಡೆಯೋಣ. ನಮ್ಮ ಮೌಲ್ಯ ನಮ್ಮ ನಡವಳಿಕೆಯಲ್ಲಿ ಇರುತ್ತದೆ ಎಂಬುದನ್ನು ಎಂದಿಗೂ ಮರೆಯದಿರೋಣ.
ಸತ್ಯಮೇವ ಜಯತೆ!
(ಸೂಚನೆ: ಸಜ್ಜೆ ಪಾಳ್ಯದ ಹೋರಾಟಗಾರರು ಮತ್ತು ಸಾರ್ವಜನಿಕರು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ, ವಂಚಕರಿಂದ ವೇದಿಕೆಗಳನ್ನು ಮತ್ತು ಹೋರಾಟವನ್ನು ರಕ್ಷಿಸಿಕೊಳ್ಳಲು ಕೋರಲಾಗಿದೆ.)