ಕೆಂಪೇಗೌಡರ ತತ್ತ್ವ-ಆದರ್ಶಗಳ ರಕ್ಷಣೆ ಹಾಗೂ ಸಮುದಾಯದ ಸ್ವಾಭಿಮಾನದ ಏಳಿಗೆಗಾಗಿ ಮುಳಬಾಗಿಲಿನಲ್ಲಿ ಬದಲಾವಣೆ ಅಗತ್ಯ: ರೋಹನ್ ಗೌಡ ಕರೆ

In an uncompromising call for self-respect, community unity, and grassroots empowerment, Rohan Gowda delivers a fearless critique of opportunistic leaders who exploit Nadaprabhu Kempegowda’s legacy for political gain while neglecting the real struggles of the Vokkaliga community. Highlighting ground realities in Mulbagal—such as administrative apathy, false legal harassment, and the systematic suppression of youth leadership—he urges families to move beyond symbolic celebrations and instill historical awareness, constitutional literacy, and unyielding self-reliance in the next generation. Standing as an aspiring Director in the Karnataka Rajya Vokkaligara Sangha elections under "Srimathi Rangammanavara Tanda," Rohan Gowda presents a principled, action-driven vision rooted in Dharma, legal protection, and fearless accountability to ensure true dignity, equality, and progress for every family.

Rohan Gowda

9/17/20261 min read

ಸ್ವಾಭಿಮಾನಿ ಒಕ್ಕಲಿಗ ಸಮಾಜದ ಭವಿಷ್ಯ ಮತ್ತು ನಮ್ಮ ಹೊಣೆಗಾರಿಕೆ: ಮುಳಬಾಗಿಲಿನ ಮಣ್ಣಿನಿಂದ ನನ್ನಂತರಂಗದ ತುಡಿತ

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅಥವಾ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮಹೋನ್ನತ ದೈವ ಸಮಾನರಾದ, ನಾಡಿನ ಹೆಮ್ಮೆಯ ನಾಡಪ್ರಭು—ನಮ್ಮ ಒಕ್ಕಲಿಗ ಕುಲ ತಿಲಕರಾದ ಕೆಂಪೇಗೌಡರನ್ನು ಬಳಸಿಕೊಳ್ಳುವುದು ಎಷ್ಟು ಸರಿ?

ಯಾರಿಗೆ ಕೆಂಪೇಗೌಡರ ಗೌರವ ಮತ್ತು ಮರ್ಯಾದೆಯನ್ನು ಕಾಪಾಡಿಕೊಳ್ಳುವುದು ಗೊತ್ತಿಲ್ಲವೋ, ಅಂತಹವರು ಇಂದು ಕೆಂಪೇಗೌಡರ ಜಯಂತಿಯನ್ನು ಆಚರಿಸಲು ಹೊರಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬಡತನವಿದ್ದರೂ ಎಲ್ಲೂ ಕೈಚಾಚದೆ, ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡು ನಡೆಯುವ, ತಮ್ಮ ಮಕ್ಕಳಿಗೆ ಆ ಸ್ವಾಭಿಮಾನವನ್ನೇ ಆಸ್ತಿಯಾಗಿ ನೀಡುವ ಹಾಗೂ ಸಮಸ್ತ ಮನುಕುಲವನ್ನು ಸಮಾನತೆಯಿಂದ ಕಂಡು ಅನ್ನ ನೀಡುವ ಅನ್ನದಾತರು ನಮ್ಮ ಒಕ್ಕಲಿಗರು.

ಇದಕ್ಕೆ ಪೂರಕ ಉದಾಹರಣೆ ಎಂದರೆ ನಮ್ಮ ಹೆಮ್ಮೆಯ ನಾಡಪ್ರಭು ಶ್ರೀ ಕೆಂಪೇಗೌಡರ ಜೀವನ ಶೈಲಿ, ಅವರು ನಾಡಿಗೆ ನೀಡಿದ ಕೆರೆಗಳು ಮತ್ತು ಭೈರವಿ ಕೆಂಪೇಗೌಡರ ಸ್ವಾಭಿಮಾನದ ಚರಿತ್ರೆ. ಇದನ್ನು ಸರಿಯಾಗಿ ತಿಳಿಯಬೇಕಾದರೆ ನಮ್ಮ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಕೇಳಬೇಕು. ಏಕೆಂದರೆ ಭೈರವಿ ಕೆಂಪೇಗೌಡರ ಭೈರವಿ ರಾಗಕ್ಕೆ ಶ್ರೀಗಳು ಮನಸೋತು ಸಂಗೀತದಲ್ಲಿ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ಇಷ್ಟೇ ಏಕೆ, ಇತಿಹಾಸವನ್ನು ತಿಳಿಯುತ್ತಾ ಹೋದರೆ ಕೆ. ಎಚ್. ರಾಮಯ್ಯನವರಿಂದ ಹಿಡಿದು ಅವರ ಕಾಲಘಟ್ಟದ ಅನೇಕರು ಹಾಗೂ ಭೈರವೈಕ್ಯ ಜಗದ್ಗುರುಗಳಾದ, ಪರಮಪೂಜ್ಯ ನಮ್ಮೆಲ್ಲರ ಕುಲಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಇವರೆಲ್ಲರ ಮತ್ತು ಇನ್ನು ಅನೇಕರ ತ್ಯಾಗಮಯಿ ಜೀವನದಿಂದ ಇಂದು "ನಾವು ಒಕ್ಕಲಿಗರು" ಎಂದರೆ ಸಮಾಜದಲ್ಲಿ ಒಂದು ಕೀರ್ತಿ, ಗೌರವ ಹಾಗೂ ಮರ್ಯಾದೆ ಇದೆ.

ಆದರೆ ಮತ್ತೊಮ್ಮೆ ಹೇಳುತ್ತೇನೆ—ಕೆಲವರಿಗೆ ನಾಚಿಕೆಯಾಗಬೇಕು! ಕೇವಲ ಕೆಂಪೇಗೌಡರ ಜಯಂತಿ ಎಂದು ಸಮಾಜದಲ್ಲಿ ತಮ್ಮ ಹೆಸರುಗಳನ್ನು ಪ್ರದರ್ಶಿಸಿಕೊಳ್ಳಲು ಮತ್ತು ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಅಮಾಯಕ, ಗೌರವಯುತ, ಸ್ವಾಭಿಮಾನಿ ಒಕ್ಕಲಿಗರನ್ನು ಬದಿಗಿಟ್ಟು, ಕಾಲಕ್ರಮೇಣ ಸಮಾಜದಲ್ಲಿ ಶಾಶ್ವತವಲ್ಲದ ಅಜ್ಞಾನದ ಕತ್ತಲೆಯಲ್ಲಿ ನಿಲ್ಲಿಸುತ್ತಿದ್ದಾರೆ.

ನಮ್ಮ ಸಮಾಜ ಎದುರಿಸುತ್ತಿರುವ ವಾಸ್ತವಿಕ ಸವಾಲುಗಳು

ಈ ವಿಚಾರವನ್ನು ನಾನು ಸೂಕ್ಷ್ಮವಾಗಿ ಪ್ರಸ್ತಾಪಿಸಲು ಬಲವಾದ ಕಾರಣವಿದೆ. ಇಂದು ಸಮಾಜವು ಒಕ್ಕಲಿಗರನ್ನು ವಿಭಜಿತರನ್ನಾಗಿ ಮಾಡಿ, ಅದರಲ್ಲಿನ ಬಡವರನ್ನು ಮತ್ತು ಪ್ರಮುಖವಾಗಿ ಸ್ವಾಭಿಮಾನಿಗಳನ್ನು ತುಳಿತಕ್ಕೆ ಒಳಪಡಿಸುತ್ತಿದೆ. ಅವರನ್ನು ಅಸಹಾಯಕರನ್ನಾಗಿ ಮಾಡಿ, ಬುದ್ಧಿಹೀನರಂತೆ ನಡೆಸಿಕೊಳ್ಳುತ್ತಿರುವುದು ಇಂದಿನ ಕಹಿಯಾದರೂ ಒಪ್ಪಲೇಬೇಕಾದ ಸತ್ಯ.

  • ಸ್ವಾರ್ಥ ನಾಯಕತ್ವದ ವಿಫಲತೆ: ಕೇವಲ ತಮ್ಮ ಪೂರ್ವಜರು ಮಾಡಿರುವ ಒಳ್ಳೆಯ ಕೆಲಸಗಳನ್ನು ಹೇಳಿಕೊಂಡು, ಸಮಾಜದಲ್ಲಿ ಕನಿಷ್ಠ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡು, ಕೇವಲ ಜಾತಿಯ ಗೌರವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಕಷ್ಟದಲ್ಲಿರುವ ಬಡವರಿಗೆ ಮತ್ತು ಅವಶ್ಯಕತೆ ಇರುವ ಸ್ವಾಭಿಮಾನಿಗಳಿಗೆ ನಯಾಪೈಸೆ ಪ್ರಯೋಜನವಿಲ್ಲದಂತೆ ಜೀವಿಸುವ ನಾಯಕರು ಇಂದು ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಇವರಿಂದ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ.

  • ಧರ್ಮಗುರುಗಳ ಮಾರ್ಗದರ್ಶನ: ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರಸಕ್ತ ಭೈರವನ ಅನುಗ್ರಹದಿಂದ ಶಕ್ತಿಯುತ ಕುಲಗುರುಗಳು ಮಾತ್ರವಲ್ಲದೆ, ಸಮುದಾಯದ ಹಿಂದಿನ ಗೌರವ-ಕೀರ್ತಿಗಳನ್ನು ಕಾಪಾಡುವ ಮತ್ತು ನ್ಯಾಯ-ಧರ್ಮದ ತೂಕ ಮಾಡುವ ಜವಾಬ್ದಾರಿಯುತ ಮಾರ್ಗದರ್ಶಕರಾಗಿದ್ದಾರೆ.

  • ಮುಳಬಾಗಿಲು ತಾಲೂಕಿನ ಸ್ಥಳೀಯ ಸಮಸ್ಯೆಗಳು: ಮುಳಬಾಗಿಲು ತಾಲೂಕಿನಲ್ಲಿ ನಾವು ಕಂಡಂತೆ, ಅನೇಕ ಹಳ್ಳಿಗಳಲ್ಲಿ ಸ್ವಾಭಿಮಾನಿ ಕೃಷಿ ಅಂದರೆ ಒಕ್ಕಲುತನವನ್ನೇ ನಂಬಿರುವ ಒಕ್ಕಲಿಗರಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ತ್ವರಿತವಾಗಿ ತಲುಪಿಸುವ ಸರಿಯಾದ ವೇದಿಕೆ ಇಲ್ಲ. ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಠಾಣೆಗೆ ದುರುದ್ದೇಶಪೂರಿತವಾಗಿ ದೂರುಗಳು ದಾಖಲಾಗುತ್ತಿವೆ, ಸುಳ್ಳು ಅಟ್ರಾಸಿಟಿ ಪ್ರಕರಣಗಳ ಬೆದರಿಕೆ ಹಾಕಲಾಗುತ್ತಿದೆ. ರೆವೆನ್ಯೂ ಮತ್ತು ತಹಶೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿ ಬಹಳ ಸುಲಭವಾಗಿ ಬಗೆಹರಿಯುವ ಆಸ್ತಿ ಅಥವಾ ನ್ಯಾಯ ತೀರ್ಮಾನಗಳನ್ನು ತಳಮಟ್ಟದಲ್ಲಿ ಗುರುತಿಸಿ, ಪರಸ್ಪರ ಅರ್ಥ ಮಾಡಿಸಿ ನ್ಯಾಯ ಒದಗಿಸುವ ನಾಯಕರೇ ಇಲ್ಲದಂತಾಗಿದ್ದಾರೆ.

  • ಸಮುದಾಯದ ದ್ರೋಹಿಗಳು: ಮುಳಬಾಗಿಲು ತಾಲೂಕಿನಲ್ಲಿ ಕುಲದ್ರೋಹಿಗಳಂತೆ ಬೆಳೆದಿರುವ ಕೆಲವರು ಇದ್ದಾರೆ. ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದಲ್ಲೂ ಸಮಾಜಕ್ಕೆ ದ್ರೋಹ ಬಗೆಯುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿರುವುದು ದುರದೃಷ್ಟಕರ.

ರಾಜಕೀಯ ಲೆಕ್ಕಾಚಾರ ಮತ್ತು ಮೌನದ ಪರಿಣಾಮ

ಮುಳಬಾಗಿಲು ತಾಲೂಕಿನ ಪ್ರಸಕ್ತ ಸಮಸ್ಯೆಗಳಲ್ಲಿ, ಒಂದು ವೇಳೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ವ್ಯಕ್ತಿಯ ನಡವಳಿಕೆ ನ್ಯಾಯಯುತ ಮತ್ತು ಧರ್ಮದಿಂದ ಕೂಡಿದ್ದರೂ ಸಹ, ಅವರಿಗೆ ನ್ಯಾಯ ಸಿಗುತ್ತಿಲ್ಲ. ತಾಲೂಕಿನಲ್ಲಿ ಅಮಾಯಕ, ಸ್ವಾಭಿಮಾನಿ, ನಿಜವಾಗಲೂ ಕಷ್ಟದಲ್ಲಿರುವ, ಜಾತಿವಾದಿಗಳಲ್ಲದ ಹಿಂದುಳಿದ ಮತ್ತು ದಲಿತ ವರ್ಗಗಳ ಅನೇಕ ಪಂಗಡಗಳಲ್ಲಿನ ಜವಾಬ್ದಾರಿಯುತ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಳ್ಳಿಗಳಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಕೆಲವು ಅಸಂವಿಧಾನಿಕ ಮತ್ತು ಸಂವಿಧಾನದ ಹೆಸರಿನಲ್ಲಿ ಜಾತಿವಾದ ಮಾಡುತ್ತಾ ಸಮಾಜದ ಶಾಂತಿ-ಸಾಮರಸ್ಯ ಕೆಡಿಸುವ ರೋಲ್-ಕಾಲ್ ಜನರಿಂದ ತೊಂದರೆಯಾದಾಗ, ನಮ್ಮ ತಾಲೂಕಿನ ನಾಯಕರಾಗಿರುವ ಒಕ್ಕಲಿಗರು ಧೈರ್ಯವಾಗಿ ನ್ಯಾಯ ಮತ್ತು ಧರ್ಮದ ಪರವಾಗಿ ನಿಲ್ಲುತ್ತಿಲ್ಲ.

ಬದಲಿಗೆ, ನ್ಯಾಯ-ಧರ್ಮವನ್ನು ನೋಡುವ ಬದಲು ಅಧರ್ಮ ಮಾಡುವ ಜನರೊಂದಿಗೆ ಮುಂಬರುವ ಚುನಾವಣಾ ಲೆಕ್ಕಾಚಾರಗಳನ್ನು ಮಾಡಿ, ಮತಪೆಟ್ಟಿಗೆಗಾಗಿ ನಮ್ಮ ಒಕ್ಕಲಿಗ ಸಮುದಾಯದ ಸ್ವಾಭಿಮಾನಿಗಳ ಮರ್ಯಾದೆಯನ್ನು ಬದಿಗೊತ್ತುತ್ತಿದ್ದಾರೆ. ಅವರಿಗೆ ಸಂವಿಧಾನ ಹಾಗೂ ಕಾನೂನಿನ ಅರಿವನ್ನು ನೀಡದೆ, "ನಿಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕುತ್ತಾರೆ" ಎಂದು ಹೆದರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ. ಕೊನೆಗೆ ಅದೇ ಸಮಾಜದ್ರೋಹಿ ಜನರ ಹಿಂದೆ ಕಾಣಿಸಿಕೊಂಡು, ಅದಕ್ಕೆ "ರಾಜಕೀಯ" ಎಂಬ ಬಣ್ಣ ಬಳಿದು, ಹಿಂಭಾಗಕ್ಕೆ ಬಂದು "ಎಲ್ಲರೂ ಒಂದೇ" ಎಂದು ಹೇಳುತ್ತಾರೆ.

ಇಂತಹ ಜನರು ಇರುವವರೆಗೂ ಸಮಾಜದಲ್ಲಿ ಐಕ್ಯತೆ ಬರಲು ಸಾಧ್ಯವಿಲ್ಲ. ಹಾಗೂ ಜಾತ್ಯತೀತ ಅನ್ನದಾತ ಪರಂಪರೆಯ ಒಕ್ಕಲಿಗರಿಗೆ "ಜಾತಿವಾದಿಗಳು" ಎಂಬ ಪಟ್ಟ ತಪ್ಪುವುದೂ ಇಲ್ಲ.

ಬದಲಾವಣೆಯ ತುರ್ತು ಮತ್ತು ಯುವಜನತೆಯ ಜಾಗೃತಿ

ಒಮ್ಮೆ ಯೋಚನೆ ಮಾಡಿ—ನಮ್ಮ ತಾಲೂಕಿಗೆ ನಿಜಕ್ಕೂ ಏನು ಬೇಕಿದೆ?

ಸಂವಿಧಾನದಲ್ಲಿ ಅವಕಾಶಗಳನ್ನು ಕಂಡುಕೊಳ್ಳಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ. ಆದರೆ ಮುಳಬಾಗಿಲಿನಲ್ಲಿ ಸುದೀರ್ಘ ಅವಧಿಗೆ ಮೀಸಲಾತಿ ಕ್ಷೇತ್ರವಾಗಿದ್ದರೂ, ಕಾನೂನಿನಲ್ಲಿ ಅವಕಾಶವಿದ್ದರೂ, ಸಮಾನತೆ ಮತ್ತು ನ್ಯಾಯವನ್ನು ಕಾನೂನಾತ್ಮಕವಾಗಿ ಪ್ರಶ್ನಿಸದಿರಲು ಕಾರಣ ಇಂದಿನ ಹೊಟ್ಟೆ ತುಂಬಿದ ನಾಯಕರು! ಅವರಿಗೆ ನಾಯಕತ್ವ ಎಂದರೇನು ಎಂಬ ಅರಿವೇ ಇಲ್ಲ. ಜನರಿಗೆ ಸುಳ್ಳುಗಳನ್ನು ಹೇಳಿ, ಸಂವಿಧಾನ ಮತ್ತು ಜ್ಞಾನ ಎರಡಕ್ಕೂ ಮೋಸ ಮಾಡುತ್ತಾ, ಗುಂಪುಗಳನ್ನು ಕಟ್ಟಿ, ಕೇವಲ ಅನ್ಯ ಜಾತಿಗಳ ಜನರನ್ನು ದೂಷಿಸಿ ಲಾಭ ಪಡೆಯುವ ಬ್ರಿಟಿಷರ ಸಂತತಿಯಂತೆ ಮುಳಬಾಗಿಲಿನಲ್ಲಿ ವ್ಯವಹರಿಸುತ್ತಿದ್ದಾರೆ.

ಇನ್ನಾದರೂ ಯೋಚಿಸಿ, ಮುಳಬಾಗಿಲಿನಲ್ಲಿ ಬದಲಾವಣೆ ಬರಬೇಕಿದೆ! ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ. ಇಷ್ಟು ವರ್ಷ ಕೇವಲ ಮನೆಗಳನ್ನು ಕಟ್ಟಿಸಿಕೊಂಡು, ಜಯಂತಿಗಳಿಗೆ ಸೀಮಿತವಾದ ಜೀವನ ನಡೆಸುತ್ತಿದ್ದೀರಿ. ಆದರೆ ಆ ಜಯಂತಿಗೆ ಕಾರಣರಾದ ಮಹಾಪುರುಷರ ೧% ಗುಣವೂ ಇಲ್ಲದ ಅಯೋಗ್ಯರನ್ನು ಬೆಳೆಸಿದ್ದೀರಿ. ಇವರೆಲ್ಲರೂ ತಮ್ಮ ತಮ್ಮ ಮಕ್ಕಳನ್ನು ಬೆಳೆಸುತ್ತಾ, ತಮ್ಮ ಸ್ವಾರ್ಥಕ್ಕಾಗಿ ಒಕ್ಕಲಿಗರಲ್ಲಿ ಮತ್ತೊಬ್ಬ ಯುವಕ ನಾಯಕನಾಗಿ ಬೆಳೆದುಬಂದರೆ ತಮ್ಮ ಸ್ಥಾನಕ್ಕೆ ಧಕ್ಕೆ ಬರುತ್ತದೆ ಎಂದು ಯುವಕರನ್ನು ಬೆಳೆಸುತ್ತಲೇ ಇಲ್ಲ. ನನ್ನ ಏಳನೇ ತರಗತಿಯ ಜ್ಞಾಪಕ ಶಕ್ತಿಯಿಂದ ನೋಡುತ್ತಾ ಬಂದಂತೆ, ಇಲ್ಲಿಯವರೆಗೆ ಒಕ್ಕಲಿಗರಲ್ಲಿ ಯುವಕರನ್ನು ನಾಯಕರನ್ನಾಗಿ ಬೆಳೆಸಿಲ್ಲ. ಕೇವಲ ಕುಟುಂಬದ ಹಿನ್ನೆಲೆಯಲ್ಲಿ ಒಕ್ಕಲಿಗರ ಹೆಸರಿನಲ್ಲಿ ಲೂಟಿ ಹೊಡೆದ ಗುಂಪು ಬಿಟ್ಟರೆ, ಯುವಕರನ್ನು ಕೇವಲ ರಾಜಕೀಯದ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ.

ಇಷ್ಟೂ ವರ್ಷಗಳಾದರೂ ಯಾವುದಾದರೂ ಸಮಸ್ಯೆಯಾದಾಗ "ನಾನು ಒಕ್ಕಲಿಗರ ಪರ ಇದ್ದೇನೆ" ಎಂದು ಎದೆ ತಟ್ಟಿ ಹೇಳಿಕೊಳ್ಳುವ ಒಬ್ಬ ಪೌರುಷವಿರುವ ನಾಯಕನನ್ನು ಸೃಷ್ಟಿಸಲು ಸಾಧ್ಯವಾಗದಿರಲು ಯಾರು ಕಾರಣ? ರಾಜಕೀಯದಲ್ಲಿ ತಮ್ಮ ಜಾತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗದ ರಣಹೇಡಿಗಳು ಇವರಾಗಿದ್ದಾರೆ. ಯಾವ ಜಾತಿಯವರೂ ಒಕ್ಕಲಿಗರನ್ನು ಕೀಳಾಗಿ ಕಾಣುವುದಿಲ್ಲ; ಆದರೆ ಇವರೇ ಸ್ವಾಭಿಮಾನ ಮರೆತು, ಹಿರಿಯರು ಕೊಟ್ಟ ಗೌರವವನ್ನು ಉಳಿಸಿಕೊಳ್ಳದೆ ಎಂಜಲು ಕಾಸಿಗೆ ನಾಯಿಯಂತೆ ಜೀತ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪರಿಪಕ್ವವಾದ ಇತಿಹಾಸ ಮತ್ತು ನಮ್ಮ ಗುರು-ಹಿರಿಯರ ಪರಂಪರೆ ತಿಳಿಯದಿರುವುದು.

ಈ ಕೂಡಲೇ ಎಲ್ಲರೂ ಜಾಗೃತರಾಗಿ. ನಿಮ್ಮ ಮಕ್ಕಳಿಗೆ ಸ್ವಾಭಿಮಾನ ಮತ್ತು ನಮ್ಮ ಪೂರ್ವಜರ ನಿಜವಾದ ಇತಿಹಾಸವನ್ನು ತಿಳಿಸಿಕೊಡಿ. ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಸೂಕ್ತ ವೇದಿಕೆಗಳನ್ನು ನಿರ್ಮಿಸಿ. ಆಗ ಮಾತ್ರ ಕೆಂಪೇಗೌಡರ ಜಯಂತಿಯು ಅರ್ಥಪೂರ್ಣವಾಗುತ್ತದೆ. ಮುಳಬಾಗಿಲಿನಲ್ಲಿ ಕೆಂಪೇಗೌಡರ ಜಯಂತಿಯಲ್ಲಿ ಪಾಲ್ಗೊಳ್ಳುವ ಜನರನ್ನು ಪ್ರಶ್ನಿಸಿದರೆ, ಬಹುಶಃ ಕೆಂಪೇಗೌಡರ ಅಸ್ಮಿತೆಯ ಬಗ್ಗೆ ಅರಿವೇ ಇರುವುದಿಲ್ಲ. ನಾಯಕರಂತೆ ನಟಿಸುವವರಲ್ಲಿ ಅವರ ಶೇಕಡಾ 1% ರಷ್ಟು ಗುಣಗಳೂ ಇಲ್ಲ.

ನನ್ನ ಸ್ಪಷ್ಟ ನಿಲುವು ಮತ್ತು ನೇರ ಎಚ್ಚರಿಕೆ

ಈ ಎಲ್ಲಾ ಅವಲೋಕನಕ್ಕೆ ಕಾರಣ—ಇಂದು ನಾನು ಕಂಡ ಕೆಂಪೇಗೌಡರ ಜಯಂತಿಯ ಪೂರ್ವಭಾವಿ ಸಭೆ. ಈ ಸಭೆಯ ವಿಚಾರವನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಎಲ್ಲರನ್ನೂ ಕರೆಯಿಸಬೇಕಿತ್ತು. ಅವಕಾಶಕ್ಕಾಗಿ ಕಾಯುತ್ತಿರುವ ಮುಳಬಾಗಿಲು ತಾಲೂಕಿನ ಅನೇಕ ಯುವಕರನ್ನು ಕಡೆಗಣಿಸಿರುವುದು ಹಾಗೂ ಅವರನ್ನು ತಲುಪಲು ವಿಫಲವಾಗಿರುವುದು ಎದ್ದು ಕಾಣುತ್ತಿದೆ.

ಏನೇ ಇರಲಿ, ನಾನು ಸತ್ಯನಿಷ್ಠ ಕೆಂಪೇಗೌಡರ ಅಸ್ಮಿತೆಯನ್ನು ಅನುಸರಿಸುತ್ತಿರುವ ಹೆಮ್ಮೆಯ ಒಕ್ಕಲಿಗ ರೋಹನ್ ಗೌಡ. ನನಗೆ ಯಾರ ಭಯವೂ ಇಲ್ಲ, ನನ್ನ ಸಂವಹನ ನೇರ, ದಿಟ್ಟ ಮತ್ತು ನಿರಂತರವಾಗಿರುತ್ತದೆ.

ಇನ್ನು, ಕೆಂಪೇಗೌಡರ ಪುತ್ತಳಿ ಅನಾವರಣ ವಿಚಾರದಲ್ಲಿ ನಾವು ಹಣ ಪಡೆದಿದ್ದೇವೆ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕುಲದ್ರೋಹಿಗಳಿಗೆ ನನ್ನದೊಂದು ಎಚ್ಚರಿಕೆ: ಯಾವುದೇ ಕಾರಣಕ್ಕೂ ಕೆಂಪೇಗೌಡರಿಗೆ ಸಮನಾಗಿ ನಾವು ಯಾರನ್ನೂ ಒಪ್ಪುವುದಿಲ್ಲ! ಇದನ್ನು ಮರೆಯಬೇಡಿ. ಸ್ವಾಭಿಮಾನವಿಲ್ಲದೆ ಎಂಜಲು ಕಾಸಿಗೆ ಜೀವಿಸುವ ಸಹಸ್ರಾರು ಜನರು ಎದುರಾದರೂ ನಮ್ಮ ನಿಲುವು ಒಂದೇ. ನಾವು ಬಾವಿಯ ಕಪ್ಪೆಗಳಲ್ಲ. ಹಲವಾರು ಜಿಲ್ಲೆಗಳಲ್ಲಿ ಒಕ್ಕಲಿಗರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಅನುಭವ ಪಡೆದಿದ್ದೇವೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕೆಂಪೇಗೌಡರ ಪುತ್ತಳಿಯ ಜೊತೆಯಲ್ಲಿ ಯಾರ ಪುತ್ತಳಿಯನ್ನೂ—ಅವರು ಎಷ್ಟೇ ದೊಡ್ಡವರಾಗಿದ್ದರೂ—ನಿಲ್ಲಿಸಿಲ್ಲ ಎಂಬುದನ್ನು ಮರೆಯಬೇಡಿ. ಇದನ್ನು ಪ್ರಶ್ನಿಸದ ನಿಮಗಂತೂ ಸ್ವಾಭಿಮಾನವಿಲ್ಲ ಹಾಗಂತ ದೇಶದ ಎಲ್ಲಾ ಒಕ್ಕಲಿಗರು ಹೀಗೆ ಇರುತ್ತಾರೆ ಎಂದು ಯೋಚಿಸಬೇಡಿ...

ನಾವು ಒಕ್ಕಲಿಗರಾಗಿ ಹುಟ್ಟಿದ್ದರೆ ಮತ್ತು ನಿಜವಾದ ಕೆಂಪೇಗೌಡರ ಅನುಯಾಯಿಗಳಾಗಿದ್ದರೆ, ಧರ್ಮ, ಸತ್ಯ ಮತ್ತು ನ್ಯಾಯ ಬಿಟ್ಟು ಮಾತನಾಡಬಾರದು. ನಾವು ಸಮುದಾಯದ ಹಿತಕ್ಕಾಗಿ ಸದಾ ಚಿಂತನೆ ಮಾಡುತ್ತೇವೆ. ಆದರೆ ೨೪ ಗಂಟೆಯೂ ರಾಜಕೀಯ, ಅಧಿಕಾರ ಮತ್ತು ಹಣದ ವ್ಯಾಪಾರದಲ್ಲಿರುವ ನಮ್ಮದೇ ಸಮುದಾಯದ ಜನರು ದಯಮಾಡಿ ಸಮುದಾಯದ ಹಿರಿಯರ ಹಾಗೂ ಗುರುಗಳ ಪರಂಪರೆಯನ್ನು ಗೌರವಿಸಿ, ಉಳಿಸಿ. ಅದನ್ನು ಬಳಸಿಕೊಳ್ಳಲು ನೋಡಿದರೆ, ನಿಮ್ಮ ಬೆನ್ನ ಹಿಂದೆ ಎಷ್ಟೇ ದೊಡ್ಡ ಶಕ್ತಿಗಳಿದ್ದರೂ ಸಮುದಾಯದ ವಿರುದ್ಧ ನಿಂತಾಗ ಸೋಲುತ್ತೀರಿ. ಧರ್ಮನಿಷ್ಠೆಯನ್ನು ಮರೆಯಬೇಡಿ, ನಂತರ ಪಶ್ಚಾತ್ತಾಪ ಪಡಬೇಡಿ.

ದಾಖಲೆಗಳನ್ನು ಓದಿ, ಬುದ್ಧಿವಂತರಾಗಿ ಮಾತನಾಡಿ. ಮುಳಬಾಗಿಲು ತಾಲೂಕಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕುರಿಗಳಂತೆ ನಂಬುವುದನ್ನು ಬಿಟ್ಟು, ಜ್ಞಾನಿಗಳಂತೆ ಓದಿ ತಿಳಿಯಿರಿ. ಒಕ್ಕಲಿಗ ಸಮುದಾಯ ಅಧರ್ಮದ ದೇಣಿಗೆಯಿಂದ ನಿಂತಿಲ್ಲ; ಧರ್ಮದ ಸಂಸ್ಕೃತಿ ಮತ್ತು ಪರಂಪರೆಯಿಂದ ನಿಂತಿದೆ. ಕೆಂಪೇಗೌಡರ ವ್ಯಕ್ತಿತ್ವವನ್ನು ಪ್ರತಿಯೊಬ್ಬ ಮಗುವಿನಲ್ಲಿ ತುಂಬಿದಾಗ ಮಾತ್ರ ಸಮಾಜ ಬೆಳೆಯುತ್ತದೆ.

ಇವಿಷ್ಟು ನನ್ನ ಅನುಭವದ ವ್ಯಾಪ್ತಿಗೆ ಬಂದ ಸತ್ಯಗಳು. ನನ್ನ ಮಾತುಗಳು ಸುಳ್ಳಾದರೆ ಮರೆತುಬಿಡಿ, ಸತ್ಯವೆನಿಸಿದರೆ ಇಂದೇ ಜಾಗೃತರಾಗಿ!

ನಿಮ್ಮ ಸ್ವಾಭಿಮಾನಿ ಕುಲಬಾಂಧವ ರೋಹನ್ ಗೌಡ

(ಆಕಾಂಕ್ಷಿ, ನಿರ್ದೇಶಕರ ಸ್ಥಾನ - ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ)

ತಂಡ: ಒಕ್ಕಲಿಗರ ಮಹಾಸಾದ್ವಿ ಶ್ರೀಮತಿ ರಂಗಮ್ಮನವರ ತಂಡ

Connect

Join the conversation with Rohan Gowda

Contact

Follow

hello@rohangowda.com

+91 9513 369 356

© 2026. All rights reserved.